alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕಪ್ಪೆಂದು ಸುಟ್ಟು ಸಾಯಿಸಿದ ಪಾಪಿ ಪತಿ

ಹೆಂಡತಿ ಜೀವಂತ ಇರುವಾಗಲೇ ಗಂಡ ಬೆಂಕಿ ಇಟ್ಟ ಪ್ರಕರಣ ಗುರುವಾರ ರಾತ್ರಿ ನಡೆದಿದ್ದು, ಘಟನೆ ಸಂಬಂಧ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಂಡತಿ ಕಪ್ಪು ಎಂಬ ಕಾರಣಕ್ಕೆ ಹಾಗೂ ವರದಕ್ಷಿಣೆ ವಿಚಾರಕ್ಕೆ ನಡೆಯುತ್ತಿದ್ದ ಜಗಳವೇ ಘಟನೆಗೆ ಕಾರಣ ಎನ್ನಲಾಗಿದೆ.

ಕೋಲ್ಕತದ ನ್ಯೂ ಬರಾಕ್‍ಪುರದ ಪುರ್ಬಾ ಕೊಡಲಿಯಾ ಬಂಧಿತ ವ್ಯಕ್ತಿ. ಈತ ಪತ್ನಿ 28 ವರ್ಷದ ಸಂಗೀತ ಸೂತ್ರಧಾರ್ ಗೆ  ಗುರುವಾರ ರಾತ್ರಿ ಬೆಂಕಿ ಹಾಕಿದ್ದಾನೆ. ಸುಟ್ಟ ಗಾಯಗಳಿಂತ ತೀವ್ರ ಗಾಯಗೊಂಡ ಅಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶುಕ್ರವಾರ ಮೃತಪಟ್ಟಿದ್ದಾಳೆ. ಸಂಗೀತಾ ಕಪ್ಪು ಎಂಬ ಕಾರಣಕ್ಕೆ ಗಂಡ ಹಿಂಸೆ ನೀಡುತ್ತಿದ್ದ ಎಂದು ಸಂಗೀತಾ ತಾಯಿ ಆರೋಪಿಸಿದ್ದಾರೆ.

ಇನ್ನು ಘಟನೆ ನಡೆದ ತಕ್ಷಣ ಸೋದರಿಗೆ ಮೃತಳ ಗಂಡ ಕರೆ ಮಾಡಿ, ಅಡುಗೆ ಮಾಡುವಾಗ ಆಕೆಗೆ ಬೆಂಕಿ ತಗುಲಿದ್ದು, ಗಾಯಗೊಂಡಿದ್ದಾಳೆ ಎಂದು ಹೇಳಿದ್ದ. ಆದರೆ ಅದು ಸುಳ್ಳು. ಆತ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಆತನೇ ಬೆಂಕಿ ಇಟ್ಟಿರಬಹುದು ಎಂದು ಮೃತಳ ಸೋದರಿ ಸಂಶಯ ವ್ಯಕ್ತಪಡಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...