alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮುಕರ ರಾಕ್ಷಸೀ ಕೃತ್ಯಕ್ಕೆ ಬಲಿಯಾದ್ಲು ವೃದ್ಧ ಮಹಿಳೆ

rape

ಕೋಲ್ಕತ್ತಾದಲ್ಲಿ ಐವರು ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಮೃತಪಟ್ಟಿದ್ದಾಳೆ. ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದ ರಕ್ಕಸರು, ಕಬ್ಬಿಣದ ರಾಡ್ ಮತ್ತು ಒಡೆದ ಬಾಟಲಿಯನ್ನು ಆಕೆಯ ಖಾಸಗಿ ಅಂಗದೊಳಗೆ ಹಾಕಿ ಭೀಕರವಾಗಿ ಹಿಂಸಿಸಿದ್ದರು.

ಜುಲೈ 4ರಂದು ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿತ್ತು. ಒಂದು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಮಹಿಳೆ, ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಅತ್ಯಾಚಾರದ ಬಳಿಕ ಮಹಿಳೆಯನ್ನು ಹಿಂಸಿಸಿದ ಕಾಮುಕರು ಮನೆಯ ಹೊರಗಡೆ ಬಿಸಾಡಿ ಹೊರಟು ಹೋಗಿದ್ದರು.

ರಸ್ತೆ ಬದಿಯಲ್ಲಿ ಪುಟ್ಟ ಫುಡ್ ಸ್ಟಾಲ್ ಇಟ್ಕೊಂಡು ಮಹಿಳೆ ಜೀವನ ಸಾಗಿಸುತ್ತಿದ್ಲು. ಘಟನೆ ನಡೆದ ದಿನ ಆಕೆಯ ಇಬ್ಬರು ಗಂಡು ಮಕ್ಕಳು ಮನೆಯಲ್ಲಿರಲಿಲ್ಲ. ಬಾಲ್ಕನಿಯಲ್ಲಿ ಕುಳಿತಿದ್ದ 62 ವರ್ಷದ ಮಹಿಳೆ ಮೇಲೆ ಏಕಕಾಲಕ್ಕೆ ಐವರು ಕಾಮುಕರು ದಾಳಿ ಮಾಡಿದ್ದರು.

ನಂತರ ಅವಳನ್ನು ಕಂಬಕ್ಕೆ ಕಟ್ಟಿ ಹಾಕಿ ಅತ್ಯಾಚಾರ ಮಾಡಿದ್ರು. ಗುಪ್ತಾಂಗದಲ್ಲಿ ಒಡೆದ ಬಾಟಲಿ ಮತ್ತು ಕಬ್ಬಿಣದ ರಾಡನ್ನು ಹಾಕಿ ಅವಳನ್ನು ಕೊಲ್ಲಲು ಯತ್ನಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...