alex Certify
ಕನ್ನಡ ದುನಿಯಾ       Mobile App
       

Kannada Duniya

90 ವರ್ಷದ ವೃದ್ಧೆಯನ್ನೂ ಬಿಡದ ಕಾಮುಕನಿಗೆ ಜೀವಾವಧಿ ಶಿಕ್ಷೆ

90 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಮಾಡಿದ್ದ ಕಾಮುಕನಿಗೆ ಕೊಲ್ಹಾಪುರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2015ರ ಮಾರ್ಚ್ 4ರಂದು ಈ ಘಟನೆ ನಡೆದಿತ್ತು.

ವಿಷ್ಣು ಕೃಷ್ಣ ನಲವಾಡೆ ಎಂಬ 50 ವರ್ಷದ ವ್ಯಕ್ತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದ. ನಾಗನವಾಡಿ ನಿವಾಸಿಯಾಗಿದ್ದ ವಿಷ್ಣುಕೃಷ್ಣ, ವೃದ್ಧೆಯ ನೆರೆಮನೆಯಲ್ಲೇ ವಾಸವಾಗಿದ್ದ.

3 ವರ್ಷಗಳ ಕಾಲ ಈ ಪ್ರಕರಣದ ವಿಚಾರಣೆ ನಡೆದಿದ್ದು, ಇಂದು ತೀರ್ಪು ಪ್ರಕಟವಾಗಿದೆ. ವಿಚಾರಣೆ ವೇಳೆ 9 ಮಂದಿ ವಿಷ್ಣುಕೃಷ್ಣನ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ.

ಹಾಸಿಗೆ ಹಿಡಿದಿದ್ದ ವೃದ್ಧ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಷ್ಣುಕೃಷ್ಣನ ಕೃತ್ಯ ಅಮಾನವೀಯ ಅಂತಾ ನ್ಯಾಯಾಧೀಶೆ ಅದಿತಿ ಕದಮ್ ಅಭಿಪ್ರಾಯಪಟ್ಟರು. ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...