alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಹರಣಕಾರರಿಂದ ಮಗನನ್ನು ಬಿಡಿಸಲು 10 ಲಕ್ಷ ತಂದಿದ್ದ ಹೆತ್ತವರಿಗೆ ಶಾಕ್

ವಾರದ ಹಿಂದೆ ಅಪಹರಣವಾಗಿದ್ದ ದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. 21 ವರ್ಷದ ಆಯುಷ್ ನೌಟಿಯಾಲ್ ಕೊಲೆಯಾದ ಯುವಕ. ದೆಹಲಿಯ ದ್ವಾರಕಾದಲ್ಲಿರುವ ಮನೆಯ ಸಮೀಪವೇ ಅವನನ್ನು ಕಿಡ್ನಾಪ್ ಮಾಡಲಾಗಿತ್ತು.

ಅಪಹರಣಕಾರರು 50 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಕಾಲೇಜಿಗೆ ಹೊರಡಲು ಆಯುಷ್ ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆ ಕಿಡ್ನಾಪ್ ಆಗಿದ್ದ. ಮಗ ಕಾಲೇಜಿಗೆ ಹೋಗಿದ್ದಾನೆ ಅಂತಾನೇ ಹೆತ್ತವರು ಭಾವಿಸಿದ್ದರು. ಸಂಜೆಯಾದ್ರೂ ವಾಪಸ್ ಬಾರದೇ ಇದ್ದಿದ್ರಿಂದ ಪೊಲೀಸರಿಗೆ ದೂರು ನೀಡಿದ್ದಾರೆ.

ಆಯುಷ್ ಫೋನ್ ನಿಂದ್ಲೇ ಆತನ ತಂದೆಗೆ ದುಷ್ಕರ್ಮಿಗಳು ಮೆಸೇಜ್ ಕಳುಹಿಸಿದ್ರು. ಆತನ ಮೇಲೆ ಹಲ್ಲೆ ಮಾಡಿರೋ ಫೋಟೋ ಕಳಿಸಿದ್ದರು. ಜೊತೆಗೆ 50 ಲಕ್ಷ ರೂಪಾಯಿ ಕೊಟ್ರೆ ಮಾತ್ರ ಆಯುಷ್ ನನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ಅಪಹರಣಕಾರರಿಗೆ ಕೊಡಲೆಂದು ಆಯುಷ್ ಪೋಷಕರು 10 ಲಕ್ಷ ರೂಪಾಯಿ ಸಂಗ್ರಹಿಸಿದ್ದರು. ಆದ್ರೆ ಹೇಳಿದ ಜಾಗಕ್ಕೆ ಕಿಡ್ನಾಪರ್ಸ್ ಬರಲೇ ಇಲ್ಲ. ಬಳಿಕ ಚರಂಡಿಯೊಂದರಲ್ಲಿ ಆಯುಷ್ ಶವ ಪತ್ತೆಯಾಗಿದೆ. ತಂದೆ-ತಾಯಿಗೆ ಆಯುಷ್ ಒಬ್ಬನೇ ಮಗನಾಗಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...