alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ವರನ್ನು ಕೊಂದಾಕೆ ಜೈಲಿನಲ್ಲೇ ನೇಣಿಗೆ ಶರಣು

ಪಾಲಕರು ಹಾಗೂ ಇಬ್ಬರು ಮಕ್ಕಳನ್ನು ಕೊಂದ ಆರೋಪದಡಿ ಜೈಲು ವಾಸ ಅನುಭವಿಸುತ್ತಿದ್ದ 34 ವರ್ಷದ ಕೈದಿಯೊಬ್ಬಳು, ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕಣ್ಣೂರ್ ನಲ್ಲಿ ನಡೆದಿದೆ.

ಜೈಲಿನ ಆವರಣದಲ್ಲಿ ಸೌಮ್ಯಾ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಣಾರಾಯ್ ಮೂಲದ ಯುವತಿಯನ್ನು ಇದೇ ಏಪ್ರಿಲ್‍ ನಲ್ಲಿ ನಾಲ್ಕು ಕೊಲೆ ಮಾಡಿದ ಆರೋಪದಡಿ ಬಂಧಿಸಲಾಗಿತ್ತು.

ಮೃತ ಆರೋಪಿ, 78 ವರ್ಷದ ತಂದೆ, 68 ವರ್ಷದ ತಾಯಿ ಹಾಗೂ 8 ವರ್ಷದ ಮಗಳನ್ನು ಮೂರು ತಿಂಗಳಲ್ಲಿ ಕೊಂದಿದ್ದಾಳೆ. ಇನ್ನು 2012ರಲ್ಲೂ ಸೌಮ್ಯಾ ತನ್ನ ಮಗಳನ್ನು ಕೊಲೆ ಮಾಡಿದ್ದು, ಈ ನಾಲ್ವರು ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಳು.

50 ದಿನಗಳ ಅಂತರದಲ್ಲಿ ಮೂರು ಸಾವುಗಳಾದ ಕುರಿತು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ ಪೊಲೀಸರಲ್ಲಿ ದೂರು ನೀಡಿದ್ದರು. ಪೊಲೀಸರು ಸೌಮ್ಯಾಳ ವಿಚಾರಣೆ ನಡೆಸಿದ ವೇಳೆ ತಾನು ನಾಲ್ಕು ಜನರನ್ನು ಇಲಿ ಪಾಷಾಣ ಹಾಕಿ ಕೊಂದಿರೋದಾಗಿ ಒಪ್ಪಿಕೊಂಡಿದ್ದಳು. ಬಳಿಕ ಆಕೆಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...