alex Certify
ಕನ್ನಡ ದುನಿಯಾ       Mobile App
       

Kannada Duniya

ಈಜು ಸ್ಪರ್ಧೆಯಲ್ಲಿ ಸಾವಿಗೀಡಾದ ಶಾಲಾ ಬಾಲಕ

ದೇವಸ್ಥಾನ ಒಂದರ ಕೊಳದಲ್ಲಿ ನಡೆಯುತ್ತಿದ್ದ ಈಜು ಸ್ಪರ್ಧೆಯಲ್ಲಿ ಶಾಲಾ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನ ತಲ್ಲಸೇರಿಯಲ್ಲಿ ನಡೆದಿದೆ. ಶಾಲೆಯೊಂದು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಈಜು ಸ್ಪರ್ಧೆಯಲ್ಲಿ ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ರಿತ್ವಿಕ್ ಹೆಸರಿನ 9ನೇ ತರಗತಿಯ ವಿದ್ಯಾರ್ಥಿ ಕೂಡ ಭಾಗವಹಿಸಿದ್ದ. ಸರ್ಕಾರಿ ಶಾಲೆಗಳ ಸಂಘದಿಂದ ಈ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು.

ಎರಡನೇ ಸುತ್ತಿನ ಸ್ಪರ್ಧೆ ನಡೆಯುವ ವೇಳೆಯಲ್ಲಿ ರಿತ್ವಿಕ್ ಕೊಳದ ಮಧ್ಯದಲ್ಲಿ ಮುಳುಗಿಬಿಟ್ಟ. ಈ ಸಂದರ್ಭದಲ್ಲಿ ಆತ ಮುಳುಗುತ್ತಿರೋದನ್ನ ಗಮನಿಸಿದ ಕೆಲವರು ಆತನನ್ನ ಕಾಪಾಡೋಕೆ ನೀರಿಗೆ ಹಾರಿದರು. ಆತನನ್ನ ಕಾಪಾಡುವ ವೇಳೆಗಾಗ್ಲೇ ಬಾಲಕ ಉಸಿರು ನಿಲ್ಲಿಸಿಬಿಟ್ಟಿದ್ದ.

ಅಪಾಯ ಜರುಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳದೆ ಇದ್ದದ್ದೇ ಘಟನೆ ನಡೆಯಲು ಕಾರಣ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಕೊಳವಿದ್ದಂತ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗಿದ್ದರೂ ಆಯೋಜಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿಲ್ಲ. ಕೇರಳ ಶಿಕ್ಷಣ ಸಚಿವರು ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...