alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳದಲ್ಲಿ ನಡೆದಿದೆ ಶಾಕಿಂಗ್ ಘಟನೆ

ಕೇರಳದ ಕ್ಲಿನಿಕ್ ಒಂದರ ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ್ದ 2 ದಿನಗಳ ಹಸುಗೂಸಿನ ಶವ ಪತ್ತೆಯಾಗಿದೆ. ಟಾಯ್ಲೆಟ್ ಬ್ಲಾಕ್ ಆಗಿದ್ದರಿಂದ ಅದನ್ನು ಸ್ವಚ್ಛ ಮಾಡಲು ಪ್ಲಂಬರ್ ಕರೆಸಲಾಗಿತ್ತು. ಪೈಪ್ ಗೆ ಅಡ್ಡಲಾಗಿ ಸಿಕ್ಕಿಹಾಕಿಕೊಂಡಿದ್ದ ಹೆಣ್ಣುಮಗುವಿನ ಮೃತದೇಹವನ್ನು ಪ್ಲಂಬರ್ ಹೊರತೆಗೆದಿದ್ದಾನೆ.

ಡಾ.ಅಬ್ದುಲ್ ರಹಮಾನ್ ಎಂಬುವವರಿಗೆ ಸೇರಿದ ಕ್ಲಿನಿಕ್ ಅದು. ವೈದ್ಯಕೀಯ ಪರೀಕ್ಷೆ ನೆಪದಲ್ಲಿ ಹೆಣ್ಣುಶಿಶುವನ್ನು ಆಸ್ಪತ್ರೆಗೆ ಕರೆತಂದಿದ್ದ ಪೋಷಕರು ಅದನ್ನು ಟಾಯ್ಲೆಟ್ ನಲ್ಲಿ ಹಾಕಿ ಫ್ಲಶ್ ಮಾಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಮಹಿಳೆಗೆ ಟಾಯ್ಲೆಟ್ ನಲ್ಲೇ ಹೆರಿಗೆ ಆಗಿರಬಹುದು ಅಂತಾನೂ ಹೇಳಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕ್ಲಿನಿಕ್ ಬಂದಿದ್ದ ಎಲ್ಲಾ ರೋಗಿಗಳ ವಿವರ ಸಂಗ್ರಹಿಸಿದ್ದಾರೆ. ಆದ್ರೆ ಈವರೆಗೂ ಮೃತ ಮಗುವಿನ ಹೆತ್ತವರು ಯಾರು ಅನ್ನೋದು ಪತ್ತೆಯಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...