alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಸರ್ಕಾರಿ ಶಾಲೆಯ ಶಿಕ್ಷಕರು ಮಾಡಿದ್ದಾರೆ ಮಾನಗೇಡಿ ಕೆಲಸ

ಕೇರಳದ ಚೆಂಬುಕಡವುನಲ್ಲಿರೋ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಹಾಗೂ ಓರ್ವ ಸಿಬ್ಬಂದಿ ಮಾನಗೇಡಿ ಕೆಲಸ ಮಾಡಿದ್ದಾರೆ. ಮಾಹೆನಿಂದ ಮದ್ಯದ ಬಾಟಲಿಗಳನ್ನು ಸ್ಮಗ್ಲಿಂಗ್ ಮಾಡಿ ಅದನ್ನು ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್ ನಲ್ಲಿ ಅಡಗಿಸಿಟ್ಟಿದ್ದಾರೆ.

ಈ ವಿಚಾರವನ್ನು ಅಬಕಾರಿ ಇಲಾಖೆ ಖಚಿತಪಡಿಸಿತ್ತು. ಹಾಗಾಗಿ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ. ಮಾಹೆಯಲ್ಲಿ ಬಸ್ ನಿಲ್ಲಿಸಿದ್ದ ಶಿಕ್ಷಕ ಅಲ್ಲಿ ಮದ್ಯದ ಬಾಟಲಿ ಕೊಂಡು ಅದನ್ನು ವಿದ್ಯಾರ್ಥಿಯ ಬ್ಯಾಗ್ ನಲ್ಲಿ ಅಡಗಿಸಿಟ್ಟಿದ್ದ.

7ನೇ ತರಗತಿ ವಿದ್ಯಾರ್ಥಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದ. ಬಳಿಕ ಅಬಕಾರಿ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದರು. ಶಿಕ್ಷಕರನ್ನು ವಿಚಾರಣೆ ನಡೆಸಿ, ಅವರು ಮಾಡಿರೋ ಕೃತ್ಯದ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...