alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯೊಳಗೆ ದಫನ್ ಆಗಿತ್ತು 4 ಶವ…!

ದೆಹಲಿಯ ಬುರಾರಿಯಲ್ಲಿ 11 ಜನರ ಆತ್ಮಹತ್ಯೆ ಪ್ರಕರಣದ ನಂತ್ರ ಕೇರಳದಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ತೋಡುಪೂಜಾದಲ್ಲಿ ಒಂದೇ ಕುಟುಂಬದ ನಾಲ್ವರ ಶವ ಮನೆಯೊಳಗೆ ಸಿಕ್ಕಿದೆ. ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

51 ವರ್ಷದ ಕೃಷ್ಣ, ಪತ್ನಿ ಸುಶೀಲಾ, ಮಗಳು ಆಶಾ ಹಾಗೂ ಮಗ ಅರ್ಜುನ್ ಮೃತರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮನೆಯವರನ್ನು ಅಕ್ಕಪಕ್ಕದವರು ನೋಡಿರಲಿಲ್ಲವಂತೆ. ಜುಲೈ 29 ರಂದು ಘಟನೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ತಂತ್ರ-ಮಂತ್ರಕ್ಕೆ ಇವರು ಬಲಿಯಾಗಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಎಲ್ಲ ಶವ ಮನೆಯೊಳಗೆ ಮಣ್ಣಿನಡಿ ಸಿಕ್ಕಿದೆ. ದೊಡ್ಡ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ನಂತ್ರ ಸತ್ಯ ತಿಳಿಯಬೇಕಿದೆ. ಕೆಲ ದಿನಗಳ ಹಿಂದಷ್ಟೇ ಕೃಷ್ಣನನ್ನು ತಂತ್ರ-ಮಂತ್ರ ಮಾಡ್ತಾನೆಂಬ ಕಾರಣಕ್ಕೆ ಪೊಲೀಸರು ಬಂಧಿಸಿದ್ದರು. ಮನೆ ಬಳಿ ಹೋದ ಸಂಬಂಧಿಕರು ಹಾಗೂ ಸ್ಥಳಿಯರಿಗೆ ಗೋಡೆ ಹಾಗೂ ನೆಲದ ಮೇಲೆ ರಕ್ತ ಕಾಣಿಸಿದೆ. ತಕ್ಷಣ ಅವ್ರು ಪೊಲೀಸರಿಗೆ ದೂರು ನೀಡದ್ದಾರೆ. ನಂತ್ರ ಪ್ರಕರಣ ಬಯಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...