alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಯಾಂಗ್ ರೇಪ್ ಮುಚ್ಚಿ ಹಾಕಲು ಪೊಲೀಸ್ ಕೈ ಸೇರ್ತು 1.5 ಲಕ್ಷ ರೂ.

ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ. 8 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಲಂಚ ಪಡೆದಿದ್ದಾರೆ. ಅತ್ಯಾಚಾರಿಗಳು ಪೊಲೀಸರಿಗೆ ಲಂಚ ನೀಡಿದ್ದಾರೆಂಬ ಸತ್ಯವನ್ನು ಅಪರಾಧಿ ವಿಭಾಗದ ಪೊಲೀಸರು ಬಹಿರಂಗಪಡಿಸಿದ್ದಾರೆ.

ಜನವರಿ 10ರಂದು 8 ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. ಅಪಹರಣಕಾರ ಮೊದಲು ಅತ್ಯಾಚಾರವೆಸಗಿದ್ದಾನೆ. ನಂತ್ರ ಮೀರತ್ ನಲ್ಲಿರುವ ತನ್ನ ಸ್ನೇಹಿತನನ್ನು ಕರೆದಿದ್ದಾನೆ. ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಬಾಲಕಿ ತಂದೆ ದೂರು ನೀಡಿದ್ದರು ಎನ್ನಲಾಗಿದೆ. ವಿಶೇಷ ಪೊಲೀಸ್ ಅಧಿಕಾರಿ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ.

ಪೊಲೀಸ್ ಅಧಿಕಾರಿಗೆ ಹಣ ನೀಡಿದ್ದ ಆರೋಪಿಗಳು ಬಾಲಕಿ ಕೊಲೆಗೆ ಯತ್ನಿಸಿದ್ದರು. ಕೊಲೆಗೂ ಮುನ್ನ ನನಗೂ ಅವಕಾಶ ನೀಡಿ ಎಂದಿದ್ದ ಅಧಿಕಾರಿ. ಜನವರಿ 10 ರಿಂದ 5 ದಿನ ನಿರಂತರವಾಗಿ ಅತ್ಯಾಚಾರ ನಡೆದಿದೆ. ನಂತ್ರ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಈ ಪ್ರಕರಣ ಮುಚ್ಚಿ ಹಾಕಲು ಆರೋಪಿಗಳು 1.5 ಲಕ್ಷ ನೀಡಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...