alex Certify
ಕನ್ನಡ ದುನಿಯಾ       Mobile App
       

Kannada Duniya

ವಾಮಾಚಾರಕ್ಕೆ ಬಲಿಯಾಗಿದ್ದಾನೆ ಪುಟ್ಟ ಬಾಲಕ

ಉತ್ತರ ಪ್ರದೇಶದ ಕಸ್ಗಂಜ್ ನಲ್ಲಿ ಕಾಣೆಯಾಗಿದ್ದ 6 ವರ್ಷದ ಬಾಲಕನ ಶವ ಪತ್ತೆಯಾಗಿದೆ. ಮಾಟ-ಮಂತ್ರಕ್ಕಾಗಿ ಮಗುವನ್ನು ನರಬಲಿ ಕೊಟ್ಟಿರಬಹುದು ಅನ್ನೊ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಬಾಲಕ ಪವನ್ ನ ಪೋಷಕರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತಾಜ್ಪುರ ಗ್ರಾಮಕ್ಕೆ ಬಂದಿದ್ರು.

ಆಲದ ಮರದ ಬುಡದಲ್ಲಿ ಬಾಲಕನ ಶವ ಸಿಕ್ಕಿದೆ. ಸಮೀಪದಲ್ಲೇ ದೇವರ ಫೋಟೋಗಳು, ಅರಿಶಿನ ಕುಂಕುಮ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳು ಕೂಡ ಪತ್ತೆಯಾಗಿವೆ. ಹರಿತವಾದ ಆಯುಧದಿಂದ ಮಗುವಿನ ಕತ್ತನ್ನು ಕತ್ತರಿಸಲಾಗಿದೆ. ಆದ್ರೆ ಮರದ ಬುಡದಲ್ಲಿ ರಕ್ತದ ಕಲೆಗಳು ಇರಲಿಲ್ಲ.

ಹಾಗಾಗಿ ಶವವನ್ನು ಇಲ್ಲಿಗೆ ತಂದು ಎಸೆಯಲಾಗಿದೆ ಅಂತಾ ಪೊಲೀಸರು ಶಂಕಿಸಿದ್ದಾರೆ. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಅಂತಾ ಹೇಳಲಾಗ್ತಿದೆ. ಹಾಗಾಗಿ ಯಾರೋ ಮಾಂತ್ರಿಕರು ಈ ಕೃತ್ಯ ಎಸಗಿರಬಹುದು ಅನ್ನೋ ಶಂಕೆ ಬಲವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...