alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನ ಮಾಡ್ತಿದ್ದ ಮಹಿಳಾ ಟೀಚರ್ ಹಿಂದಿದೆ ಭಯಾನಕ ಸತ್ಯ

ದೆಹಲಿ ಕರಾವಲ್ನಗರದಲ್ಲಿ ಡಾನ್ಸ್ ಟೀಚರ್ ಒಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಇಬ್ಬರು ವಿದ್ಯಾರ್ಥಿಗಳ ಮೊಬೈಲ್ ಕಳ್ಳತನ ಆರೋಪದ ಮೇಲೆ ಜೈಲು ಸೇರಿದ್ದಾಳೆ. ವಿಚಾರಣೆ ವೇಳೆ ಮಹಿಳೆ ಆಶ್ಚರ್ಯಕರ ವಿಷ್ಯಗಳನ್ನು ಹೊರ ಹಾಕಿದ್ದಾಳೆ.

ಮಹಿಳೆ ಕಳ್ಳತನ ಮಾಡಿದ್ದು ಇದೇ ಮೊದಲಲ್ಲ. 22 ವರ್ಷದ ಮಹಿಳಾ ಡಾನ್ಸ್ ಟೀಚರ್ ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್ ತೋರಿಸಿ ಹೆದರಿಸುತ್ತಿದ್ದಳು. ನಂತ್ರ ಕಳ್ಳತನ ಮಾಡ್ತಿದ್ದಳು. ಪುರುಷ ವೇಷದಲ್ಲಿ ಕಳ್ಳತನ ಮಾಡ್ತಿದ್ದ ಈಕೆ ವಿರುದ್ಧ ಈವರೆಗೂ ಯಾವುದೇ ದೂರು ದಾಖಲಾಗಿರಲಿಲ್ಲ.

ಬಾಬ್ ಕಟ್ ಮಾಡಿದ್ದ ಆರೋಪಿ ಸದಾ ಪುರುಷರ ಉಡುಗೆ ತೊಡುತ್ತಾಳಂತೆ. ಈಕೆ ಸಲಿಂಗಕಾಮಿಯಾಗಿದ್ದು, ಇಬ್ಬರು ಹುಡುಗಿಯರನ್ನು ಮದುವೆಯಾಗಿದ್ದಾಳಂತೆ. ಡಾನ್ಸ್ ಕ್ಲಾಸ್ ನಷ್ಟದಲ್ಲಿ ನಡೆಯುತ್ತಿದ್ದ ಕಾರಣ ಕಳ್ಳತನಕ್ಕಿಳಿದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...