alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಅಕ್ರಮ ಸಂಬಂಧದ ವಿಡಿಯೋ ನೋಡಿ NRI ಪತಿ ಮಾಡ್ದ ಇಂಥ ಕೆಲಸ

ವಿವಾಹೇತರ ಸಂಬಂಧವೊಂದು ಇಡೀ ಕುಟುಂಬವನ್ನು ಬಲಿ ಪಡೆದಿದೆ. ಪತ್ನಿಯ ಅಕ್ರಮ ಸಂಬಂಧ ಬಯಲಿಗೆ ಬರ್ತಿದ್ದಂತೆ ಅನಿವಾಸಿ ಭಾರತೀಯನೊಬ್ಬ, ಪತ್ನಿ ಜೊತೆ ಇಬ್ಬರು ಮಕ್ಕಳ ಸಮೇತ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ, ಮಕ್ಕಳಿಗೆ ಬೆಂಕಿಯಿಟ್ಟು ನಂತ್ರ ತಾನೂ ಬೆಂಕಿಗೆ ಆಹುತಿಯಾಗಿದ್ದಾನೆ.

ಘಟನೆ ಪಂಜಾಬಿನ ಕಪುರ್ತಲಾದಲ್ಲಿ ನಡೆದಿದೆ. 35 ವರ್ಷದ ಕುಲ್ವಿಂದರ್ ಸಿಂಗ್ ಜೋರ್ಡಾನ್ ನಲ್ಲಿ ಕೆಲಸ ಮಾಡ್ತಿದ್ದ. ಪತ್ನಿಯ ಅಕ್ರಮ ಸಂಬಂಧದ ಅಶ್ಲೀಲ ವಿಡಿಯೋವೊಂದು ವೈರಲ್ ಆಗಿದೆ. ಇದ್ರಿಂದ ಕೋಪಗೊಂಡಿದ್ದ  ಕುಲ್ವಿಂದರ್ ಬುಧವಾರ ರಾತ್ರಿ ಮನೆಗೆ ಬಂದು ಮಕ್ಕಳ ಸಮೇತ ಪತ್ನಿಗೆ ಬೆಂಕಿ ಹಚ್ಚಿದ್ದಾನೆ.

ಐದು ವರ್ಷದ ಮಗ ಹಾಗೂ 8 ವರ್ಷದ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪತ್ನಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾಳೆ. ಕುಲ್ವಿಂದರ್ ಸಿಂಗ್ ವಿದೇಶದಲ್ಲಿ ಕೆಲಸ ಮಾಡ್ತಿದ್ದ. ಮನೆಯಲ್ಲಿ ಮಕ್ಕಳ ಜೊತೆಗಿದ್ದ ಪತ್ನಿಗೆ ಗ್ರಾಮದ ಕೆಲವರು ಬ್ಲಾಕ್ಮೇಲ್ ಮಾಡ್ತಿದ್ದರಂತೆ. ಆಕೆಯ ಅಶ್ಲೀಲ ವಿಡಿಯೋ ಮಾಡಿ ಪೀಡಿಸುತ್ತಿದ್ದರಂತೆ. ಪತಿ ಕುಲ್ವಿಂದರ್ ಗೂ ವಿಡಿಯೋ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮದ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...