alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ ಒಲ್ಲೆ ಎಂದಿದ್ದಕ್ಕೆ ಯುವಕನಿಂದ ಘೋರ ಕೃತ್ಯ

ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಎಂಜಿನಿಯರಿಂಗ್ ಪದವೀಧರನೊಬ್ಬ ಹೀನ ಕೃತ್ಯ ಎಸಗಿದ್ದಾನೆ. ಮದುವೆಯ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಯುವತಿ ಮತ್ತಾಕೆಯ ಸೋದರಿಯನ್ನು ಹತ್ಯೆ ಮಾಡಿದ್ದಾನೆ. 23 ವರ್ಷದ ಶೀಲು ಮತ್ತವಳ ಕಸಿನ್ ಶಿವಾನಿ ಕೊಲೆಯಾದ ಯುವತಿಯರು.

ಮನೆಯಲ್ಲೇ ಅವರನ್ನು ಹತ್ಯೆ ಮಾಡಿದ ಅಂಕಿತ್, ಯಾರಿಗೂ ಅನುಮಾನ ಬರಬಾರದೆಂದು ಶವಗಳನ್ನು ಸುಟ್ಟು ಹಾಕಿದ್ದಾನೆ. ಗುರುವಾರ ಅಂಕಿತ್, ಶೀಲು ಮನೆಗೆ ಬಂದಿದ್ದ. ತನ್ನನ್ನು ಮದುವೆಯಾಗುವಂತೆ ಕೇಳಿದ್ದಾನೆ. ಆದ್ರೆ ಶೀಲು ನಿರಾಕರಿಸಿದ್ದಾಳೆ.

ಕೋಪದಲ್ಲಿ ಕತ್ತು ಹಿಸುಕಿ ಅವಳನ್ನು ಸಾಯಿಸಿಬಿಟ್ಟಿದ್ದಾನೆ. ಸ್ಥಳದಲ್ಲೇ ಇದ್ದ ಶಿವಾನಿ ಹತ್ಯೆಯನ್ನು ನೋಡಿಬಿಟ್ಟಿದ್ದಳು. ಹಾಗಾಗಿ ಬೈಕ್ ನ ಕ್ಲಚ್ ವೈರ್ ಬಿಗಿದು ಅವಳನ್ನೂ ಕೊಂದಿದ್ದಾನೆ. ನಂತರ ತನ್ನ ಬೈಕ್ ನಲ್ಲಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಹತ್ಯೆ ನಡೆದು 24 ಗಂಟೆಗಳು ಕಳೆಯುವಷ್ಟರಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...