alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಹೆಸರಿನಲ್ಲಿ ನಾದಿನಿಯನ್ನೇ ಮಾರಾಟ ಮಾಡಿದ ಭಾವ

ಯುವತಿಯೊಬ್ಬಳಿಗೆ ಆಕೆ ಭಾವನೇ ಶತ್ರುವಾಗಿದ್ದಾನೆ. ಭಾವ, ನಾದಿನಿಯನ್ನು 60 ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ಇದಾದ ನಂತ್ರವೂ ಯುವತಿಗೆ ಕಷ್ಟ ತಪ್ಪಲಿಲ್ಲ.

ಪಶ್ಚಿಮ ಬಂಗಾಳದ ಯುವತಿಯನ್ನು ಆಕೆ ಭಾವ ಸಹರಾನ್ಪುರ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾನೆ. ಯುವತಿ ಸುಮಾರು ಒಂದು ತಿಂಗಳ ಕಾಲ ಆ ವ್ಯಕ್ತಿ ಜೊತೆ ವಾಸವಾಗಿದ್ದಳು. ಅಲ್ಲಿಂದ ತಪ್ಪಿಸಿಕೊಂಡು ಬಂದ ಯುವತಿ ಯಮುನಾ ನಗರ ತಲುಪಿದ್ದಾಳೆ. ಅಲ್ಲಿ ಭಾವನನ್ನು ನೋಡಿ ಭಯಗೊಂಡ ಯುವತಿ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಬೇಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿ ಪ್ರೇಮಿಯನ್ನು ಕರೆಸಿ, ಯುವತಿಯನ್ನು ಆತನ ವಶಕ್ಕೆ ನೀಡಿದ್ದಾರೆ.

ಭಾವ ಮದುವೆ ಮಾಡುವುದಾಗಿ ನಂಬಿಸಿ ನಾದಿನಿಯನ್ನು ಮಾರಾಟ ಮಾಡಿದ್ದನಂತೆ. ಯುವತಿ ಖರೀದಿ ಮಾಡಿದ್ದ ವ್ಯಕ್ತಿ ಜೊತೆ ವಾಸವಾಗಿದ್ದಾಗಲೇ ಇನ್ನೊಬ್ಬ ವ್ಯಕ್ತಿ ಸ್ನೇಹ ಬೆಳೆದಿತ್ತಂತೆ. ಇಬ್ಬರೂ ಮದುವೆಯಾಗುವ ಕನಸು ಕಂಡಿದ್ದರಂತೆ. ಆದ್ರೆ ಈ ವಿಷ್ಯ ಖರೀದಿ ಮಾಡಿದ ವ್ಯಕ್ತಿಗೆ ತಿಳಿದಿದ್ದಲ್ಲದೆ ಆತ ಭಾವನಿಗೆ ವಿಷ್ಯ ತಿಳಿಸಿದ್ದನಂತೆ. ಭಾವ ಸ್ಥಳಕ್ಕೆ ಬರುವ ಮೊದಲು ಯುವತಿ ಅಲ್ಲಿಂದ ತಪ್ಪಿಸಿಕೊಂಡಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...