alex Certify
ಕನ್ನಡ ದುನಿಯಾ       Mobile App
       

Kannada Duniya

ಛೀ: ಜೀನ್ಸ್-ಟೀ ಶರ್ಟ್ ತೊಟ್ಟ ಹುಡುಗಿಯರು ಮಾಡಿದ್ರು…

girls

ಅಂಗಡಿ ಮಾಲೀಕರು ಎಷ್ಟೇ ಎಚ್ಚರವಹಿಸಿದ್ರೂ ಗ್ರಾಹಕರ ವೇಷ ತೊಟ್ಟು ಬರುವ ಕಳ್ಳರು ಯಾಮಾರಿಸಿ ಹೋಗ್ತಾರೆ. ಬಂಗಾರದಿಂದ ಹಿಡಿದು ಚಪ್ಪಲಿಯವರೆಗೆ ಎಲ್ಲ ವಸ್ತುಗಳನ್ನು ಕ್ಷಣ ಮಾತ್ರದಲ್ಲಿ ಮಾಯ ಮಾಡ್ತಾರೆ ಖದೀಮರು. ಸಿಸಿ ಟಿವಿ ಅಳವಡಿಸಿರುವ ಅಂಗಡಿಯವರಿಗೆ ಕಳ್ಳರು ಯಾರೆಂಬುದಾದ್ರೂ ತಿಳಿಯುತ್ತೆ. ಸಿಸಿ ಟಿವಿ ಇಲ್ಲದ ಮಾಲೀಕರು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವುದು ಬಿಟ್ಟರೆ ಮತ್ತೇನೂ ಸಾಧ್ಯವಿಲ್ಲ.

ಗುಜರಾತಿನ ಸೂರತ್ ನಲ್ಲಿ ಅಂಗಡಿಗೆ ಬಂದ ಹುಡುಗಿಯರು ಬೆಲೆ ಬಾಳುವ ಚಪ್ಪಲಿಯನ್ನೇ ಕದ್ದೊಯ್ದಿದ್ದಾರೆ. ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ತೊಟ್ಟು ಬಂದ ಮೂವರು ಹುಡುಗಿಯರು ಸುಮಾರು ಎರಡು ಗಂಟೆಗಳ ಕಾಲ ಚಪ್ಪಲಿಯ ಹುಡುಕಾಟ ನಡೆಸಿದ್ದಾರೆ. ನಂತ್ರ ಸರಿಯಾದ ಚಪ್ಪಲಿ ಸಿಗಲಿಲ್ಲವೆಂಬ ಕಾರಣ ಹೇಳಿ ಅಂಗಡಿಯಿಂದ ಕಾಲ್ಕಿತ್ತಿದ್ದಾರೆ.

ಅವರು ಹೋದ ತಕ್ಷಣ ಸ್ಟ್ಯಾಂಡ್ ನಲ್ಲಿದ್ದ ಬೆಲೆ ಬಾಳುವ ಚಪ್ಪಲಿ ಮಾಯವಾಗಿರುವುದು ಅಂಗಡಿ ಮಾಲೀಕನ ಕಣ್ಣಿಗೆ ಬಿದ್ದಿದೆ. ಸಿಸಿ ಟಿವಿ ನೋಡಿದಾಗ ಸತ್ಯ ಹೊರಬಿದ್ದಿದೆ. ತಕ್ಷಣ ಪೊಲೀಸರಿಗೆ ಮಾಲೀಕ ದೂರು ನೀಡಿದ್ದಾನೆ. ಕಳ್ಳತನ ಮಾಡಿ ತಪ್ಪಿಸಿಕೊಂಡಿರುವ ಹುಡುಗಿಯರ ಬಂಧನಕ್ಕೆ ಬಲೆ ಬೀಸಿದ್ದಾರೆ ಪೊಲೀಸರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...