alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಯ ತಂದೆಯಿಂದ ಅವಮಾನಕ್ಕೊಳಗಾದ ಯೋಧ ಸಾವಿಗೆ ಶರಣು

ಪ್ರೇಮ ಪ್ರಕರಣವೊಂದರ ಹಿನ್ನಲೆಯಲ್ಲಿ ಛತ್ತೀಸ್ಗಢದ ಸಶಸ್ತ್ರ ಮೀಸಲು ಪಡೆಯ ಯೋಧ ತನ್ನ ಬಂದೂಕಿನಿಂದಲೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗೋಪಿ ವರ್ಮಾ ಎಂಬಾತನೇ ಮೃತ ಯೋಧ. ಕೊಟಡೋಲ್ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತಿದ್ದ ಸಂದರ್ಭದಲ್ಲೇ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಾಥಮಿಕ ತನಿಖೆಯಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ವರ್ಮಾ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ವರ್ಮಾ ಸಾವಿಗೂ ಒಂದು ದಿನ ಮೊದಲು ಆಕೆ ವರ್ಮಾನನ್ನ ತನ್ನ ಮನೆಗೆ ಆಹ್ವಾನಿಸಿದ್ದಳು.

ವರ್ಮಾ ಆಕೆಯ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಆಕೆಯ ತಂದೆಯೂ ಮನೆಯಲ್ಲೇ ಇದ್ದರು. ಇಬ್ಬರ ಪ್ರೇಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು ಗ್ರಾಮಸ್ಥರ ಮೂಲಕ ವರ್ಮಾನನ್ನ ಅವಮಾನಿಸಿದರಂತೆ.

ಈ ಘಟನೆಯಿಂದ ಮಾನಸಿಕವಾಗಿ ನೊಂದುಕೊಂಡ ವರ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ. ಆತನ ಜೇಬಿನಲ್ಲಿ ಆತ್ಯಹತ್ಯೆಯ ಚೀಟಿಯೊಂದು ಪತ್ತೆಯಾಗಿದೆ ಅಂತಿದ್ದಾರೆ ಪೊಲೀಸ್ ಅಧಿಕಾರಿಗಳು. ಆದ್ರೆ ಪೊಲೀಸರು ವರ್ಮಾ ಆತ್ಮಹತ್ಯೆಗೆ ಬೇರೆ ಏನಾದ್ರು ಕಾರಣ ಇರಬಹುದಾ ಅನ್ನೋ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...