alex Certify
ಕನ್ನಡ ದುನಿಯಾ       Mobile App
       

Kannada Duniya

ದಲಿತನನ್ನು ಮುಟ್ಟಲು 1000 ರೂ. ಚಾರ್ಜ್ ಮಾಡಿದ ವೈದ್ಯ

ದೇಶ ಎಷ್ಟೇ ಮುಂದುವರೆದ್ರೂ ಜಾತಿ-ಮತ ಭೇದ ಮಾತ್ರ ಕಡಿಮೆಯಾಗಿಲ್ಲ. ಮೇಲ್ಜಾತಿ-ಕೀಳ್ಜಾತಿ ದೌರ್ಜನ್ಯ ಕಡಿಮೆಯಾಗಿಲ್ಲ. ಉತ್ತರ ಪ್ರದೇಶದಲ್ಲಿ ದಲಿತನ ಚಿಕಿತ್ಸೆಗೆ ವೈದ್ಯನೊಬ್ಬ ಸಾವಿರ ರೂಪಾಯಿ ಕೇಳಿದ ಘಟನೆ ಬೆಳಕಿಗೆ ಬಂದಿದೆ.

ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ. ರೋಗಿಯ ಸಂಬಂಧಿಕರು ವೈದ್ಯರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಕಿಶೋರ್ ಎಂಬಾತ ತನ್ನ ತಂದೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದನಂತೆ. ತಂದೆ ಅಶಕ್ತರಾಗಿದ್ದ ಕಾರಣ ಸ್ಟ್ರೆಚ್ಚರ್ ನಲ್ಲಿ ಕುಳಿಸಿದ್ದರು ಎನ್ನಲಾಗಿದೆ.

ಚಿಕಿತ್ಸೆ ನೀಡುವ ಮುನ್ನವೇ ಜಾತಿ ನೋಡಿದ ಸರ್ಕಾರಿ ವೈದ್ಯರು ರೋಗಿಯನ್ನು ಮುಟ್ಟಲು ನಿರಾಕರಿಸಿದ್ದಾರೆ. ದಲಿತರಾದ ಕಾರಣ ರೋಗಿಯನ್ನು ಮುಟ್ಟುವುದಿಲ್ಲ. ರೋಗಿ ಪರೀಕ್ಷೆಗೆ ಸಾವಿರ ರೂಪಾಯಿ ಪ್ರತ್ಯೇಕವಾಗಿ ನೀಡಿ ಎಂದು ವೈದ್ಯ ಹೇಳಿದ್ದಾನಂತೆ. ಇದನ್ನು ವಿರೋಧಿಸಿದ್ದರಿಂದ ಕೋಪಗೊಂಡ ವೈದ್ಯ ಸ್ಟ್ರೆಚ್ಚರ್ ನಿಂದ ರೋಗಿಯನ್ನು ಕೆಳಗೆ ನೂಕಿದ್ದಾನೆ. ಕೆಳಗೆ ಬಿದ್ದ ರೋಗಿ ಅಲ್ಲಿಯೇ ಸಾವನ್ನಪ್ಪಿದ್ದಾರೆಂದು ಮಗ ಕಿಶೋರ್ ಆರೋಪ ಮಾಡಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದ ಕಾರಣ ಕಿಶೋರ್ ಕೋರ್ಟ್ ಮೆಟ್ಟಿಲೇರಿದ್ದಾನೆ. ವೈದ್ಯರ ವಿರುದ್ಧ ಕೋರ್ಟ್ ನಲ್ಲಿ ವಿಚಾರಣೆ ಶುರುವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...