alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ವಿರೋಧಿಸಿದ್ದಕ್ಕೆ ಬಾಲಕಿಯ ಕತ್ತು ಸೀಳಿದ

ಜಮ್ಶೆಡ್ಪುರದಲ್ಲಿ 5 ವರ್ಷದ ಬಾಲಕಿಯೊಬ್ಬಳ ಕತ್ತು ಸೀಳಿದ್ದ ಯುವಕನನ್ನು ಬಂಧಿಸಲಾಗಿದೆ. ಈತ ದಾಸ್ ಬಸ್ತೀ ನಿವಾಸಿ. ಕೊಲೆಯಾದ ಬಾಲಕಿ ಇವನ ಸೋದರ ಸಂಬಂಧಿ. 19 ವರ್ಷದ ಈ ಯುವಕ ಪುಟಾಣಿ ಮೇಲೆ ಕಾಮದ ಕಣ್ಣು ಹಾಕಿದ್ದ.

ಏಪ್ರಿಲ್ 4ರಂದು ಪಾಳುಬಿದ್ದ ಕಟ್ಟಡವೊಂದಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಬಾಲಕಿ ವಿರೋಧ ತೋರಿದ್ದರಿಂದ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದ. ನಂತರ ಮೃತದೇಹವನ್ನು ಕಟ್ಟಡದಿಂದ ಕೆಳಗೆ ಬಿಸಾಡಿ ಬಂದಿದ್ದ.

ನಾಪತ್ತೆಯಾದ ಬಾಲಕಿಗಾಗಿ ಆಕೆಯ ಹೆತ್ತವರು ಮತ್ತು ಸಂಬಂಧಿಕರು ಹುಡುಕಾಟ ನಡೆಸುತ್ತಿದ್ರು. ತಾನು ಕೂಡ ಅಮಾಯಕನಂತೆ ಅವರ ಜೊತೆಯಲ್ಲಿ ಶೋಧ ಕಾರ್ಯ ನಡೆಸಿದ್ದ. ಬಾಲಕಿಯ ಶವ ಪತ್ತೆಯಾದ ಕಟ್ಟಡದಿಂದ ಯುವಕ ಬರುತ್ತಿರುವುದನ್ನು ನೋಡಿದ್ದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...