alex Certify
ಕನ್ನಡ ದುನಿಯಾ       Mobile App
       

Kannada Duniya

ಜಮ್ಮುವಿನಲ್ಲೊಂದು ನಿರ್ಭಯಾ ಪ್ರಕರಣ..!

crime-1

ಜಮ್ಮುವಿನಲ್ಲಿ ರಕ್ಷಕನೇ ಭಕ್ಷಕನಾಗಿದ್ದಾನೆ. ಪೊಲೀಸ್ ಅಧಿಕಾರಿಯೇ ತನ್ನ ಮೇಲೆ ಅಮಾನವೀಯವಾಗಿ ಅತ್ಯಾಚಾರ ಮಾಡಿದ್ದಾನೆ ಅಂತಾ ಮಹಿಳೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಪೊಲೀಸ್ ಠಾಣೆಯಲ್ಲೇ ಈ ಕೃತ್ಯ ನಡೆದಿದೆ.

ಸ್ಟೇಶನ್ ಹೌಸ್ ಆಫೀಸರ್ ಆಗಿದ್ದ ವ್ಯಕ್ತಿ ಪೊಲೀಸ್ ಠಾಣೆಯಲ್ಲೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಆಕೆ ಮೇಲೆ ದೌರ್ಜನ್ಯ ಎಸಗಿದ್ದಾನಂತೆ. ನಂತರ ಅವಳ ಗುಪ್ತಾಂಗದಲ್ಲಿ ಬಿಯರ್ ಬಾಟಲಿ ಮತ್ತು ಖಾರದ ಪುಡಿ ಹಾಕಿ ಹಿಂಸಿಸಿದ್ದಾನೆ. ಈ ಘಟನೆ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದಂತೆಯೇ ಇದ್ದು, ಮಹಿಳೆಯರಲ್ಲಿ ನಡುಕ ಹುಟ್ಟಿಸಿದೆ.

ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಚಿವ ಜಿತೇಂದ್ರ ಸಿಂಗ್, ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಸೂಚಿಸಿದ್ದಾರೆ. ಜಮ್ಮುವಿನ ಕನಾಚಲ್ ಏರಿಯಾದಲ್ಲಿ ಕೆಲದಿನಗಳ ಹಿಂದೆ ಈ ಘಟನೆ ನಡೆದಿದೆ. ದಂಪತಿಯೊಬ್ಬರ ಮನೆಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿ 25 ವರ್ಷದ ಮಹಿಳೆಯನ್ನು ಠಾಣೆಗೆ ಕರೆತರಲಾಗಿತ್ತಂತೆ.

ಕನಾಚಲ್ ಠಾಣೆಯ ಸ್ಟೇಶನ್ ಹೌಸ್ ಆಫೀಸರ್ ರಾಕೇಶ್ ಶರ್ಮಾ ಒಂದು ವಾರದ ಕಾಲ ತನಗೆ ಕಿರುಕುಳ ನೀಡಿದ್ದಾನೆ ಅಂತಾ ಮಹಿಳೆ ದೂರಿದ್ದಾಳೆ. ಠಾಣೆಯಲ್ಲಿಟ್ಟುಕೊಂಡು ಪೊಲೀಸರು ಹಿಂಸಿಸ್ತಾ ಇದ್ರು, ಕುಡಿಯಲು ನೀರು ಕೇಳಿದ್ರೆ ಮೂತ್ರ ಕುಡಿಯುವಂತೆ ಒತ್ತಾಯಿಸುತ್ತಿದ್ರು ಅಂತಾ ಮಹಿಳೆ ಹೇಳಿದ್ದಾಳೆ. ತನ್ನ ಪತಿ, ತಾಯಿ ಮತ್ತು ಮಗುವನ್ನು ಕೂಡ ಪೊಲೀಸರು ಥಳಿಸಿದ್ದಾರೆ ಅಂತಾ ಆರೋಪ ಮಾಡಿದ್ದಾಳೆ. ಮೇ 6ರಂದು ಆಕೆಗೆ ಜಾಮೀನು ದೊರೆತಿದ್ದು, ತನಿಖೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...