alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನನ್ನು ಬಲಿ ಪಡೆದಿದೆ ಕೆಂಪು ಗೂಟದ ಕಾರು

boy

ಜಮ್ಮುವಿನಲ್ಲಿ ಕೆಂಪು ಗೂಟದ ವಿಐಪಿ ಕಾರು ಡಿಕ್ಕಿಯಾಗಿ 13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಮೃತ ಬಾಲಕ ಪುರುಷೋತ್ತಮ್ ಕುಮಾರ್ ಮೊಸರು ತರಲು ಅಂಗಡಿಗೆ ಹೋಗಿದ್ದ. ಈ ವೇಳೆ ಬೊಲೆರೋ ಕಾರೊಂದು ಅವನಿಗೆ ಡಿಕ್ಕಿ ಹೊಡೆದಿದೆ.

ಆದ್ರೆ ಆ ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಕಾರಿನಲ್ಲಿದ್ದ ವಿಐಪಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ಆಸ್ಪತ್ರೆಗೆ ಸೇರಿಸುವ ಸೌಜನ್ಯವನ್ನೂ ತೋರದೇ ಪರಾರಿಯಾಗಿದ್ದಾನೆ. ಕೊನೆಗೆ ಬಾಲಕನ ತಂದೆ ಸ್ಕೂಟರ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅಷ್ಟರಲ್ಲಿ ಪುರುಷೋತ್ತಮ್ ಮೃತಪಟ್ಟಿದ್ದ. ಅಪಘಾತಕ್ಕೆ ಕಾರಣರಾದ ವಾಹನದಲ್ಲಿದ್ದವರು ಸಹಾಯ ಮಾಡಿದ್ದರೆ ತನ್ನ ಮಗ ಬದುಕುತ್ತಿದ್ದ ಅಂತಾ ತಂದೆ ಪರಮ್ಜೀತ್ ಥಾಪಾ ಹೇಳಿದ್ದಾನೆ. ಕೆಂಪು ಗೂಟದ ಕಾರ್ ಆಗಿದ್ದರಿಂದ ಪೊಲೀಸರು ಕೂಡ ತನಿಖೆ ಮಾಡುತ್ತಿಲ್ಲ ಅಂತಾ ಆರೋಪಿಸಿದ್ದಾನೆ. ಆದ್ರೆ ಪ್ರಕರಣ ದಾಖಲಿಸಿಕೊಂಡು ಸಿಸಿ ಟಿವಿ ಫುಟೇಜ್ ಗಳನ್ನು ಪರಿಶೀಲಿಸುತ್ತಿರೋದಾಗಿ ಪೊಲೀಸರು ಹೇಳಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...