alex Certify
ಕನ್ನಡ ದುನಿಯಾ       Mobile App
       

Kannada Duniya

13 ಮಕ್ಕಳ ತಂದೆ ಮಾಡ್ದ ಇಂಥ ಕೆಲಸ

ಜಮ್ಮುವಿನಲ್ಲಿ ಮುಗ್ದ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದೆ. 13 ಮಕ್ಕಳ ತಂದೆಯೊಬ್ಬ 10 ವರ್ಷದ ಬಾಲಕಿಯನ್ನು ರೇಪ್ ಮಾಡಿದ್ದಾನೆ. ಬಾಲಕಿಯ ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ.

ಘಟನೆ ಸುಮಾರು 25 ದಿನಗಳ ಹಿಂದಿನದ್ದು ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಆಕೆಯ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಲಾಗಿದೆ ಎಂದು ಬಾಲಕಿ ಪಾಲಕರು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಮೂಲಗಳ ಪ್ರಕಾರ ಅತ್ಯಾಚಾರಿ ವ್ಯಕ್ತಿಗೆ 52 ವರ್ಷ ವಯಸ್ಸು ಎನ್ನಲಾಗಿದೆ. 13 ಮಕ್ಕಳ ಪಾಲಕನಾಗಿರುವ ಈ ಪಾಪಿಗೆ ಇಬ್ಬರು ಪತ್ನಿಯರಿದ್ದಾರೆ. ಘಟನೆ ನಂತ್ರ ಹುಡುಗಿ ಭಯಗೊಂಡಿದ್ದಾಳೆ. ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುವ ವಿಡಿಯೋವನ್ನು ರದ್ದುಗೊಳಿಸುವ ಪ್ರಯತ್ನ ನಡೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...