alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ನೋಟು ಕೊಟ್ಟು ಆಭರಣ ಖರೀದಿಸಿದ ದಂಪತಿ…!

ಗಂಡ- ಹೆಂಡತಿಯ ಜೋಡಿಯೊಂದು ಜಲಂಧರ್ ನ ಆಭರಣ ಮಳಿಗೆಯೊಂದಕ್ಕೆ ಹೋಗಿ ಶಾಪಿಂಗ್ ಮಾಡುತ್ತದೆ. ಎಲ್ಲಾ ಖರೀದಿ ಮಾಡಿ ಆದ ಮೇಲೆ ನೋಟಿನ ಬಂಡಲ್ ಕೊಟ್ಟು ಹೊರ ನಡೆಯುತ್ತಾರವರು. ಬಳಿಕ ಮಳಿಗೆಯವರು ನೋಡಿದರೆ ಅದು ನಕಲಿ ನೋಟುಗಳು- ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಇರಬೇಕಾದಲ್ಲಿ ‘ಎಂಟರ್‌ಟೈನ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆದಿತ್ತು.

ಅಕ್ಟೋಬರ್ 22ರಂದು ಆ ಜೋಡಿ ನಮ್ಮ ಮಳಿಗೆಗೆ ಬಂದು 1.90 ಲಕ್ಷ ರೂ. ಮೌಲ್ಯದ 56 ಗ್ರಾಂ ಗಳ ಚಿನ್ನದ ಆಭರಣವನ್ನು ಖರೀದಿಸಿತ್ತು. ಕೊನೆಗೆ ಲೆಕ್ಕಾಚಾರವೆಲ್ಲ ಆದ ಮೇಲೆ ಪಾಲಿಥಿನ್ ಬ್ಯಾಗ್‌ ನಲ್ಲಿ ಸುತ್ತಿದ ನೋಟಿನ ಬಂಡಲ್ ಅನ್ನು ನಮ್ಮ ಕೈಗಿತ್ತು ತರಾತುರಿಯಲ್ಲಿ ಹೊರಟುಹೋದರು. ಅವರು ಹೋದ ಬಳಿಕ ನಾನು ನೋಡಿದಾಗ ಅವು ನಕಲಿ ನೋಟುಗಳೆಂಬುದು ಗಮನಕ್ಕೆ ಬಂತು ಎಂದು ಆಭರಣ ಮಳಿಗೆ ಮಾಲೀಕ ಶ್ಯಾಂ ಸುಂದರ್ ವರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೀಗ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು ವಂಚಕ ದಂಪತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆ ದಂಪತಿ ಕಾರೊಂದರಲ್ಲಿ ಬಂದಿದ್ದರು. ಆದರೆ ಆ ಕಾರಿಗೆ ನೋಂದಣಿ ಪ್ಲೇಟ್ ಕೂಡಾ ಇರಲಿಲ್ಲ ಎಂಬುದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...