alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಡವಾದ ಮಗಳಿಗೆ ತಾಯಿಯಿಂದ ಇಂಥ ಶಿಕ್ಷೆ

killer_mother__1492713476_749x421

ಮಕ್ಕಳಿಗೆ ತಾಯಿ ತೋಳಿಗಿಂತ ಸುರಕ್ಷಿತ ಸ್ಥಳ ಯಾವುದಿಲ್ಲ ಎನ್ನುತ್ತಾರೆ. ಆದ್ರೆ ಜೈಪುರದಲ್ಲಿ ಒಂದು ಮಗುವಿಗೆ ತಾಯಿಯೇ ಯಮನಾಗಿದ್ದಾಳೆ. ಮಗುವನ್ನು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ಪಾಪಿ ತಾಯಿ.

ಜೈಪುರದ ಸಂಗನೇರ್ ನಲ್ಲಿ ಈ ಘಟನೆ ನಡೆದಿದೆ. ಮನೆಯಿಂದ ಹೊರಬಂದ ಮಹಿಳೆ ತನ್ನ ಮಗುವನ್ನು ಯಾರೋ ಹೊತ್ತೊಯ್ಯುತ್ತಿದ್ದಾರೆಂದು ಕೂಗಿಕೊಂಡಿದ್ದಾಳೆ. ಅಕ್ಕ-ಪಕ್ಕದವರು ಹುಡುಕಾಟ ನಡೆಸಿದ್ದಾರೆ. ಪೊಲೀಸರಿಗೂ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ತಾಯಿ ಪಿಂಕಿ ಮನೆ ಪಕ್ಕದ ಮನೆಯ ನೀರಿನ ಟ್ಯಾಂಕ್ ನಲ್ಲಿ ಮಗುವಿನ ಶವ ಸಿಕ್ಕಿದೆ.

ಮಗುವಿನ ಶವ ಸಿಕ್ಕ ಮನೆಯ ಕೀ ಪಿಂಕಿ ಬಳಿಯೇ ಇತ್ತು. ಪಿಂಕಿ ಬಗ್ಗೆ ಅನುಮಾನ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಪಿಂಕಿ ಸತ್ಯ ಬಾಯ್ಬಿಟ್ಟಿದ್ದಾಳೆ. ಪಿಂಕಿಗೆ ಹೆಣ್ಣು ಮಗುವೆಂದ್ರೆ ಇಷ್ಟವಿರಲಿಲ್ಲ. ಒಂದು ಗಂಡು ಮಗು ಸಾಕು ಎನ್ನುವ ಕಾರಣಕ್ಕೆ ಈ ಕೆಲಸ ಮಾಡಿದ್ದಾಳೆ. ಮಗುವನ್ನು ಕೊಲೆ ಮಾಡು ಎಂದು ದೇವರು ಹೇಳ್ದ. ಹಾಗಾಗಿ ಪೂಜೆ ಮಾಡಿ ಕೊಲೆ ಮಾಡಿದೆ ಎಂದಿದ್ದಾಳೆ. ಈ ಘಟನೆ ನಡೆಯುವ ವೇಳೆ ಆಕೆ ಪತಿ ಮನೆಯಲ್ಲಿಯೇ ಇದ್ದ. ಆದ್ರೆ ಆತನಿಗೆ ಏನೂ ಗೊತ್ತಾಗಿರಲಿಲ್ಲ. ಪತ್ನಿ ವಿರುದ್ಧ ಪತಿಯೇ ದೂರು ನೀಡಿದ್ದು, ಪಿಂಕಿಯನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...