alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರಿಗೆ ಯಾಮಾರಿಸುವ ಮುನ್ನ ಈಕೆ ಮಾಡಿದ್ದೇನು?

sadhwiವಂಚನೆ ಪ್ರಕರಣದಲ್ಲಿ ಬಂಧಿತಳಾಗಿದ್ದ ಸ್ವಯಂಘೋಷಿತ ಸಾಧ್ವಿಯೊಬ್ಬಳು ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ತಾತ್ಕಾಲಿಕ ಪೆರೋಲ್ ಮೇಲೆ ಹೊರ ಬಂದಿದ್ದು, ತನ್ನ ಮೇಲೆ ನಿಗಾ ವಹಿಸಲು ಬಂದಿದ್ದ ನಾಲ್ವರು ಯುವ ಪೊಲೀಸರಿಗೆ ಯಾಮಾರಿಸಿ ಪರಾರಿಯಾಗಿದ್ದಾಳೆ. ಇದಕ್ಕೂ ಮುನ್ನ ಮಾಲ್ ಒಂದಕ್ಕೆ ತೆರಳಿ ಮಸಾಜ್ ಮಾಡಿಸಿಕೊಂಡಿದ್ದು, ನಂತರ ‘ಬಾಹುಬಲಿ-ದಿ ಕನ್ಕ್ಲೂಸನ್’ ಚಿತ್ರವನ್ನು ವೀಕ್ಷಿಸಿದ್ದಾಳೆ. ಬಳಿಕ ವಾಶ್ ರೂಮಿಗೆ ಹೋಗಿ ಬರುವುದಾಗಿ ಹೇಳಿ ತಪ್ಪಿಸಿಕೊಂಡಿದ್ದಾಳೆ.

ಉತ್ತರ ಗುಜರಾತ್ ನ ಬನ್ಸ್ಕಾಂತ ಜಿಲ್ಲೆಯಲ್ಲಿ ಆಶ್ರಮ ಹೊಂದಿದ್ದ 45 ವರ್ಷದ ಸ್ವಯಂ ಘೋಷಿತ ಸಾಧ್ವಿ ಜೈ ಶ್ರೀಗಿರಿ ಕಳೆದ ವರ್ಷದ ನವೆಂಬರ್ ನಲ್ಲಿ ಜ್ಯುವೆಲರ್ಸ್ ಒಬ್ಬರಿಂದ 5 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ ಗಳನ್ನು ಖರೀದಿಸಿದ್ದು, ಅದಕ್ಕೆ ಹಣ ಪಾವತಿಸದೆ ಸತಾಯಿಸುತ್ತಿದ್ದಳು.

ಇದರಿಂದ ಬೇಸತ್ತ ಜ್ಯುವೆಲರ್ ಜನವರಿಯಲ್ಲಿ ವಂಚನಾ ಪ್ರಕರಣ ದಾಖಲಿಸಿದ್ದು, ಈಕೆಯ ಆಶ್ರಮದ ಮೇಲೆ ದಾಳಿ ನಡೆಸಿದ್ದ ಪೊಲೀಸರು ಬೆಚ್ಚಿ ಬಿದ್ದಿದ್ದರು. ಆಶ್ರಮದಲ್ಲಿ 80 ಲಕ್ಷ ರೂ. ಮೌಲ್ಯದ 24 ಚಿನ್ನದ ಗಟ್ಟಿಗಳು, 1.29 ಕೋಟಿ ರೂ. ನಗದಿನ ಜೊತೆಗೆ ಮದ್ಯದ ಬಾಟಲಿಗಳೂ ಪತ್ತೆಯಾಗಿದ್ದವು. ಆಕೆಯನ್ನು ಬಂಧಿಸಿದ್ದ ಪೊಲೀಸರು ಜೈಲಿಗಟ್ಟಿದ್ದರು.

ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ತಾತ್ಕಾಲಿಕ ಪೆರೋಲ್ ಮೇಲೆ ಹೊರ ಬಂದಿದ್ದ ಸಾಧ್ವಿ ಜೈಶ್ರೀಗಿರಿ ಗುರುವಾರದಂದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾಳೆ. ತನ್ನ ಮೇಲೆ ನಿಗಾ ವಹಿಸಲು ಬಂದಿದ್ದ ನಾಲ್ವರು ಯುವ ಪೊಲೀಸರನ್ನು ಯಾಮಾರಿಸಿದ್ದು, ಕೆಲ ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ ಅವರುಗಳು ಈಗ ಸಸ್ಪೆಂಡ್ ಆಗಿದ್ದಾರೆ. ತನ್ನ ಪೆರೋಲ್ ಅವಧಿ ವಿಸ್ತರಿಸಬಹುದೆಂಬ ನಿರೀಕ್ಷೆ ಹೊಂದಿದ್ದ ಜೈಶ್ರೀಗಿರಿ ಅದು ಸಾಧ್ಯವಾಗುವುದಿಲ್ಲವೆಂಬುದನ್ನು ಅರಿತ ಬಳಿಕ ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ. ಈಗ ಆಕೆಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...