alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆ ಕೆಲಸದಾಕೆ ಜೊತೆ ಸಂಬಂಧ ಬೆಳೆಸ್ತಿದ್ದ ಐಎಎಸ್ ಪತಿ

ರಾಜಸ್ಥಾನದ ಐ.ಆರ್.ಎಸ್. ಅಧಿಕಾರಿ ಬಿನ್ನಿ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಟ್ ಸಿಕ್ಕಿದೆ. ಮೃತ ಬಿನ್ನಿ ಕಚೇರಿಯಲ್ಲಿದ್ದ ಡೈರಿಯೊಂದು ಪೊಲೀಸರಿಗೆ ಸಿಕ್ಕಿದೆ. ಇದ್ರಲ್ಲಿ ಬಿನ್ನಿ, ಪತಿ ಐಎಎಸ್ ಅಧಿಕಾರಿ ಅಕ್ರಮ ಸಂಬಂಧದ ಬಗ್ಗೆ ಬರೆದಿದ್ದಾರೆ.

ಐಎಎಸ್ ಅಧಿಕಾರಿ ಹಾಗೂ ಬಿನ್ನಿ ಪತಿ ಗುರ್ಪ್ರೀತ್, ಮನೆಯಲ್ಲಿ ಕೆಲಸ ಮಾಡುವ 16 ವರ್ಷದ ಅಪ್ರಾಪ್ತೆ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಈ ವಿಷ್ಯವನ್ನು ಬಿನ್ನಿ ತಂದೆ ಕೂಡ ಹೇಳಿದ್ದಾರೆ. ಗುರ್ಪ್ರೀತ್, ಮನೆ ಕೆಲಸದಾಕೆ ಜೊತೆಗೊಂದೇ ಅಲ್ಲ ಅನೇಕ ಮಹಿಳೆಯರ ಜೊತೆ ಸಂಬಂಧ ಹೊಂದಿದ್ದ ಎಂದಿದ್ದಾರೆ. ಅಷ್ಟೇ ಅಲ್ಲ ಗುರ್ಪ್ರೀತ್ ಅಪ್ರಾಪ್ತೆ ಜೊತೆ ಕೋಣೆಗೆ ಹೋಗ್ತಿದ್ದ ಸಿಸಿ ಟಿವಿ ದೃಶ್ಯವನ್ನು ಪೊಲೀಸರಿಗೆ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪ್ರಾಪ್ತೆ ವಿಚಾರಣೆ ಶುರು ಮಾಡಿದ್ದಾರೆ. ಜೈಪುರ ನಿವಾಸಿ ಬಿನ್ನಿಗೆ ಪತಿ ಅಕ್ರಮ ಸಂಬಂಧ ಗೊತ್ತಾಗುತ್ತಿದ್ದಂತೆ ಆತನಿಂದ ಬೇರೆಯಾಗಿದ್ದರು. ದೆಹಲಿಯಿಂದ ಜೈಪುರಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದ ಗುರ್ಪ್ರೀತ್ ಮತ್ತೆ ಪತ್ನಿ ಜೊತೆ ವಾಸವಾಗಲು ಶುರು ಮಾಡಿದ್ದ. ಮತ್ತೆ ಗಲಾಟೆ ಶುರುವಾಗಿತ್ತು.

ಆಗಸ್ಟ್ 6ರಂದು ಬಿನ್ನಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಪತಿ ಕಾರಣವೆಂದು ಬರೆದಿದ್ದಾರೆ. ಬಿನ್ನಿ ಆತ್ಮಹತ್ಯೆ ನಂತ್ರ ಗುರ್ಪ್ರೀತ್ ನಾಪತ್ತೆಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...