alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲಲ್ಲೇ ನಡೆದಿದೆ ಎದೆ ನಡುಗಿಸುವ ಘಟನೆ

ಇಂಟರ್ ಮಿಡಿಯೇಟ್ ಪರೀಕ್ಷೆ ಬರೆಯಲು ಸ್ನೇಹಿತರೊಂದಿಗೆ ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದಿನ ಕುಕ್ಕಟಪಲ್ಲಿಯಲ್ಲಿ ನಡೆದಿದೆ.

ಮೂಸಾಪೇಟ್ ನಿವಾಸಿ ಸುಧೀರ್ ಹತ್ಯೆಗೀಡಾದ ವಿದ್ಯಾರ್ಥಿಯಾಗಿದ್ದು, ಈತ ತನ್ನ ಸ್ನೇಹಿತರ ಜೊತೆ ಸೋಮವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೈಕ್ ನಲ್ಲಿ ತೆರಳುವಾಗ ನಾಲ್ಕು ಮಂದಿ ಆತನನ್ನು ಬೈಕ್ ನಲ್ಲಿ ಬೆನ್ನತ್ತಿದ್ದಾರೆ. ಅವರುಗಳಿಂದ ತಪ್ಪಿಸಿಕೊಳ್ಳಲು ಸುಧೀರ್ ಚಲಿಸುತ್ತಿದ್ದ ಬಸ್ ಏರಿದ್ದು, ಆದರೂ ಬಿಡದೆ ಆತನನ್ನು ಬಸ್ ನಿಂದ ಎಳೆದುಕೊಂಡು ಮನಬಂದಂತೆ ಚಾಕುವಿನಿಂದ ಚುಚ್ಚಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಸುಧೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ವೈಯಕ್ತಿಕ ದ್ವೇಷದ ಕಾರಣಕ್ಕೆ ಆತನ ಸ್ನೇಹಿತರೇ ಈ ಹತ್ಯೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...