alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾದಿಂದ ಪ್ರೇರಿತನಾಗಿ ನೀಚ ಕೃತ್ಯಕ್ಕೆ ಹಾಕಿದ್ದ ಸ್ಕೆಚ್

dhl

ಶಾರುಖ್ ಖಾನ್ ನಟನೆಯ ಡರ್ ಸಿನೆಮಾದಿಂದ ಪ್ರೇರಿತನಾಗಿ ನೀಚ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ತನ್ನನ್ನು ಹುಡುಕ್ತಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಆರೋಪಿ ವಿವೇಕ್ ಕುಮಾರ್ ಅಗರ್ವಾಲ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಆಸ್ಪತ್ರೆಗೂ ದಾಖಲಾಗಿದ್ದ.

2012ರಲ್ಲಿ ವಿವೇಕ್ ಗೆ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಆಗ ಆಕೆ ಅವಿವಾಹಿತೆ. ಇಬ್ಬರೂ ಕೃತಿ ನಗರದಲ್ಲಿದ್ದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಿದ್ರು. ಆಕೆಯನ್ನು ವಿವೇಕ್ ಪ್ರೀತಿಸಲಾರಂಭಿಸಿದ್ದ, ಅವಳನ್ನೇ ಮದುವೆಯಾಗಬೇಕು ಎಂದುಕೊಂಡಿದ್ದ. ಅವಳಿಗೆ ಗೊತ್ತಿಲ್ಲದಂತೆ ಎಷ್ಟೋ ಬಾರಿ ಹಿಂಬಾಲಿಸಿಕೊಂಡು ಹೋಗಿದ್ದ.

ಅದ್ಹೇಗೋ ಅವಳ ನಂಬರ್ ಪತ್ತೆ ಮಾಡಿ ಕಾಟ ಕೊಡಲು ಶುರು ಮಾಡಿದ್ದ. ಪದೇ ಪದೇ ಕರೆ ಮಾಡಿ ಮದುವೆ ಆಗುವಂತೆ ಪೀಡಿಸ್ತಾ ಇದ್ದ. ಆಕೆ ಇವನ ನಂಬರ್ ಅನ್ನೇ ಬ್ಲಾಕ್ ಮಾಡಿದ್ಲು. ಕಳೆದ ಡಿಸೆಂಬರ್ ನಲ್ಲಿ ಬೇರೊಬ್ಬನೊಂದಿಗೆ ಅವಳ ಮದುವೆಯಾಗಿದ್ದು ನೋಡಿ ವಿವೇಕ್ ಕುದ್ದು ಹೋಗಿದ್ದ.

ಅವಳ ಪತಿಯನ್ನು ಕೊಲ್ಲಲು ನಿರ್ಧರಿಸಿದ್ದ ವಿವೇಕ್, ಫೆಬ್ರವರಿಯಲ್ಲಿ ಆತನ ಮೇಲೆ ಗುಂಡು ಹಾರಿಸಿದ್ದ, ಆದ್ರೆ ಆತ ಪಾರಾಗಿ ಬಂದಿದ್ದ. ಏಪ್ರಿಲ್ 20ರಂದು ಮತ್ತೊಮ್ಮೆ ಆತನ ಮೇಲೆ ದಾಳಿ ಮಾಡಿದ್ದ. ಆಗ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ನಟ ಶಾರುಖ್ ಖಾನ್ ಅಭಿನಯದ ಡರ್ ಚಿತ್ರ ನೋಡಿ ಹತ್ಯೆಗೆ ಪ್ಲಾನ್ ಮಾಡಿದ್ದೆ ಅಂತಾ ವಿವೇಕ್ ಒಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...