alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ನೋಟು ಸ್ವೀಕರಿಸಲು ನಕಾರ: ಚಿಕಿತ್ಸೆ ಸಿಗದೆ ಶಿಶು ಸಾವು

baby

ನಿಷೇಧಿತ ಹಳೆ ನೋಟು ಸ್ವೀಕರಿಸಲು ಪುಣೆಯ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದರಿಂದ ಹೃದಯ ತೊಂದರೆಯಿಂದ ಬಳಲುತ್ತಿದ್ದ ನವಜಾತ ಶಿಶು ಚಿಕಿತ್ಸೆ ಸಿಗದೆ ಮೃತಪಟ್ಟಿದೆ.

ಹೆಣ್ಣುಮಗುವನ್ನು ಹೃದಯ ಶಸ್ತ್ರಚಿಕಿತ್ಸೆಗಾಗಿ ರೂಬಿ ಹಾಲ್ ಕ್ಲಿನಿಕ್ ಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಆಪರೇಶನ್ ಗೆ 3.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಅಂತಾ ತಿಳಿಸಿದ ಆಸ್ಪತ್ರೆ ಸಿಬ್ಬಂದಿ ಸ್ವಲ್ಪ ಹಣವನ್ನು ಮುಂಗಡವಾಗಿ ಪಾವತಿಸುವಂತೆ ಸೂಚಿಸಿದ್ರು.

ನಿಷೇಧಿತ 1000 ಮತ್ತು 500ರ ನೋಟುಗಳಲ್ಲಿ 1 ಲಕ್ಷ ಹಣ ಕಟ್ಟಲು ದಂಪತಿ ಮುಂದಾಗಿದ್ದಾರೆ. ಆದ್ರೆ ಆಸ್ಪತ್ರೆ ಸಿಬ್ಬಂದಿ ಅದನ್ನು ಸ್ವೀಕರಿಸಿಲ್ಲ. ಚೆಕ್ ಅಥವಾ ಕಾರ್ಡ್ ಮೂಲಕ ಹಣ ಪಾವತಿಸುವುದಾಗಿ ಹೇಳಿದ್ರೂ ಆಸ್ಪತ್ರೆಯ ಆಡಳಿತ ವಿಭಾಗದವರು ಅದಕ್ಕೂ ಒಪ್ಪಿಕೊಂಡಿಲ್ಲ. ಹೀಗೆ ವಾದ- ವಿವಾದದಲ್ಲೇ ಕಾಲ ಕಳೆದಿದ್ರಿಂದ ಮಗುವಿನ ದೇಹಸ್ಥಿತಿ ಬಿಗಡಾಯಿಸಿದೆ. ಬಳಿಕ ಪೋಷಕರು ಮಗುವನ್ನು ಕೆಇಎಂ ಆಸ್ಪತ್ರೆಗೆ ದಾಖಲಿಸಿದ್ರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...