alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ಮುನ್ನ ಬಾಯ್ ಫ್ರೆಂಡ್ ಗೆ ಹತ್ತಿರವಾಗಿದ್ದಕ್ಕೆ ಇಂಥ ಶಿಕ್ಷೆ

ಇಂಡೋನೇಷ್ಯಾದಲ್ಲಿ ಯುವತಿ ಹಾಗೂ ಆಕೆಯ ಭಾವಿ ಪತಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಲಾಗಿದೆ. ಮದುವೆಗೂ ಕೆಲವು ದಿನ ಮೊದಲೇ ಇಬ್ಬರು ಬಹಳ ಹತ್ತಿರ ಬಂದಿದ್ದೇ ಈ ಶಿಕ್ಷೆಗೆ ಕಾರಣವಾಗಿದೆ. ಇಂಡೋನೇಷ್ಯಾದ Aceh ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ.

ಶಿಕ್ಷೆ ನೀಡಿದ ಪ್ರದೇಶದಲ್ಲಿ ಷರಿಯಾ ಕಾನೂನು ಜಾರಿಯಲ್ಲಿದೆ. ಮದುವೆಗಿಂತ ಮೊದಲು ಹತ್ತಿರ ಬರುವುದನ್ನು ಮದುವೆಗಿಂತ ಮೊದಲು ಸಂಬಂಧ ಬೆಳೆಸುವ ಸಮಾನವೆಂದು ಅಲ್ಲಿ ಭಾವಿಸಲಾಗುತ್ತದೆ. ಮಾಧ್ಯಮಗಳ ವರದಿ ಪ್ರಕಾರ ಯುವತಿ ಹಾಗೂ ಆಕೆ ಭಾವಿ ಪತಿಗೆ 20-20 ಏಟು ನೀಡಲಾಗಿದೆ. ಇಲ್ಲಿ ಬಹಿರಂಗ ಶಿಕ್ಷೆ ಪದ್ಧತಿ ಜಾರಿಯಲ್ಲಿದೆ.

ಈ ಜೋಡಿಗೆ ಶಿಕ್ಷೆ ನೀಡಿದ್ದು ಹಿಂದಿನ ಶುಕ್ರವಾರ ಎನ್ನಲಾಗ್ತಿದೆ. ಆ ದಿನ ಇನ್ನೊಂದು ಮಹಿಳೆ ಸೇರಿ 10 ಮಂದಿಗೆ ಶಿಕ್ಷೆಯಾಗಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿದ್ದವನಿಗೆ 36 ಏಟು ನೀಡಲಾಗಿದೆ. ಶಿಕ್ಷೆ ನೀಡುವ ವ್ಯಕ್ತಿ ತನ್ನ ಜೊತೆ ವೈದ್ಯರನ್ನು ಕರೆದೊಯ್ಯುತ್ತಾನೆ. ಶಿಕ್ಷೆಗೊಳಗಾಗುವ ವ್ಯಕ್ತಿ ಇನ್ನಷ್ಟು ಶಿಕ್ಷೆ ಅನುಭವಿಸಲು ಯೋಗ್ಯನೇ ಎಂಬುದನ್ನು ಪರಿಶೀಲಿಸಿ ಶಿಕ್ಷೆ ನೀಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...