alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಇಂಡಿಗೋ ಅಧಿಕಾರಿ

ಅಕ್ರಮ ಚಿನ್ನ ಸಾಗಣೆದಾರರೊಂದಿಗೆ ಶಾಮೀಲಾಗಿ ಅವರಿಗೆ ನೆರವು ನೀಡಿದ್ದ ಇಂಡಿಗೋ ಏರ್ಲೈನ್ಸ್ ನ ಹಿರಿಯ ಉದ್ಯೋಗಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಗೌಹಾತಿ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈತ, ಸಂಸ್ಧೆಯ ಉದ್ಯೋಗಿಗಳ ಮೇಲೆ ಪ್ರಭಾವ ಬೀರಿ ಕಳ್ಳ ಸಾಗಣೆದಾರರು ಯಾವುದೇ ತಪಾಸಣೆ ಇಲ್ಲದೆ ಚಿನ್ನ ಕಳ್ಳ ಸಾಗಣೆ ಮಾಡಲು ನೆರವಾಗುತ್ತಿದ್ದ.

ಡಿಸೆಂಬರ್ 21 ರಂದು ವಿಜಯ್ ಕುಮಾರ್ ಅಲಿಯಾಸ್ ವಿಜಯ್ ಕುಮಾರ್ ಶರ್ಮಾ ಎಂಬಾತ 2.65 ಕೆ.ಜಿ. ಚಿನ್ನ ಸಾಗಿಸುತ್ತಿದ್ದ ವೇಳೆ ಗೌಹಾತಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದ. ಅದೇ ದಿನ ಗೌಹಾತಿಯಿಂದ ದೆಹಲಿಗೆ ಪ್ರಯಾಣಿಸಿದ್ದ ಸನ್ವಾರ್ ಲಾಲ್ ಶರ್ಮಾ ಎಂಬಾತ 2.48 ಕೆ.ಜಿ. ಚಿನ್ನದೊಂದಿಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಕಸ್ಟಮ್ಸ್ ಅಧಿಕಾರಿಗಳು, ಗೌಹಾತಿಯ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದು, ಈ ವೇಳೆ ಇಂಡಿಗೋ ಏರ್ಲೈನ್ಸ್ ನ ಸೀನಿಯರ್ ಏರ್ ಪೋರ್ಟ್ ಮ್ಯಾನೇಜರ್ ರಾಜೀವ್ ಮೇದಿ ತಪಾಸಣೆ ಕೈಗೊಳ್ಳದಂತೆ ತನ್ನ ಕೈ ಕೆಳಗಿನ ಉದ್ಯೋಗಿಗಳ ಮೇಲೆ ಪ್ರಭಾವ ಬೀರಿದ್ದು ತಿಳಿದು ಬಂದಿತ್ತು. ರಾಜೀವ್ ಮೇದಿ ಹಲವಾರು ಬಾರಿ ಚಿನ್ನ ಕಳ್ಳ ಸಾಗಣೆದಾರರ ನೆರವಿಗೆ ಬಂದಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ. ಆತನನ್ನು ಈಗ ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...