alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿಯರ ಫೇಸ್ಬುಕ್ ಫೋಟೋ ಪೋರ್ನ್ ಸೈಟ್ ನಲ್ಲಿ..!

images

ಸಾಮಾಜಿಕ ಜಾಲತಾಣ ಫೇಸ್ಬುಕ್ ಎಲ್ಲರೂ ಬಳಸ್ತಾರೆ. ಕೆಲವರು ತಮ್ಮ ಸುಂದರ ಫೋಟೋಗಳನ್ನು ಫೇಸ್ಬುಕ್ ಗೆ ಹಾಕ್ತಿರುತ್ತಾರೆ. ಹೆಚ್ಚು ಲೈಕ್ ಸಿಗಲಿ ಎನ್ನುವ ಉದ್ದೇಶದಿಂದ ಪದೇ ಪದೇ ಫೋಟೋ ಬದಲಾಯಿಸುವವರೂ ಇದ್ದಾರೆ.  ನೀವೂ ಅದ್ರಲ್ಲಿ ಒಬ್ಬರಾಗಿದ್ದರೆ ಎಚ್ಚರ.

ಫೇಸ್ಬುಕ್ ನಲ್ಲಿ ನೀವು ಹಾಕಿರುವ ಫೋಟೋವನ್ನು ಕದ್ದು ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡುವ ಸೈಬರ್ ಕ್ರೈಂ ಸಂಖ್ಯೆ ಹೆಚ್ಚಾಗಿದೆ. ನಿಮಗೆ ತಿಳಿಯದೇ ನಿಮ್ಮ ಫೋಟೋ ಕದಿಯುವ ಖದೀಮರು ಅದ್ರಲ್ಲಿ ಕೆಲವೊಂದು ಬದಲಾವಣೆ ಮಾಡಿ ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡ್ತಾರೆ. ನಂತ್ರ ಅಲ್ಲಿಂದ ಫೋಟೋ ತೆಗೆಯಲು ಹಣದ ಬೇಡಿಕೆಯಿಡುತ್ತಾರೆ. ದೆಹಲಿಯ ಮಯೂರ್ ವಿಹಾರದಲ್ಲಿ ಇಂಥಹದೇ ಘಟನೆ ನಡೆದಿದೆ.

ಹುಡುಗಿಯೊಬ್ಬಳ ಫೋಟೋವನ್ನು ಫೇಸ್ಬುಕ್ ನಿಂದ ತೆಗೆದು ನ್ಯೂಡ್ ಫೋಟೋವೊಂದಕ್ಕೆ ಎಡಿಟ್ ಮಾಡಿ ಪೋರ್ನ್ ಸೈಟ್ ಗೆ ಅಪ್ಡೇಟ್ ಮಾಡಿದ್ದಾರೆ. ನಂತ್ರ ಹುಡುಗಿಗೆ ಕರೆ ಮಾಡಿ 20 ಸಾವಿರ ಕೇಳಿದ್ದಾರೆ. 20 ಸಾವಿರ ಹಣ ನೀಡಿದ್ರೂ ಸೈಟ್ ನಿಂದ ಫೋಟೋ ಡಿಲಿಟ್ ಆಗಿಲ್ಲ.

ಕೇವಲ ಫೋಟೋವೊಂದೇ ಅಲ್ಲ ಸಾಮಾಜಿಕ ಜಾಲತಾಣ ಟ್ವೀಟರ್,ನಫೇಸ್ಬುಕ್ನಲ್ಲಿರುವ ಮಾಹಿತಿಗಳನ್ನು ಹ್ಯಾಕ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಜೊತೆಗೆ ಯಾವುದೇ ಅಗತ್ಯ ಮಾಹಿತಿಗಳನ್ನು ಹಾಕಬೇಡಿ ಎಂದು ಪೊಲೀಸರು ಸಲಹೆ ನೀಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...