alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಪಕ್ಕದಲ್ಲಿದ್ರೂ ಸಹ ಪ್ರಯಾಣಿಕಳೊಂದಿಗೆ ಅಸಭ್ಯ ವರ್ತನೆ…!

ವಿಮಾನದಲ್ಲಿ ಪಕ್ಕದ ಸೀಟಿನಲ್ಲಿ ಮಲಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಮಿಚಿಗನ್ ನ ಫೆಡರಲ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಪ್ರಭು ರಾಮಮೂರ್ತಿ ತಾತ್ಕಾಲಿಕ ವೀಸಾ ಪಡೆದು ಅಮೆರಿಕದಲ್ಲಿ ವಾಸವಾಗಿದ್ದಾರೆ.

ಲಾಸ್ ವೇಗಾಸ್ ನಿಂದ ಈತ ತನ್ನ ಪತ್ನಿಯೊಂದಿಗೆ ಸ್ಪಿರಿಟ್ ಏರ್ ಲೈನ್ಸ್ ನಲ್ಲಿ ಪ್ರಯಾಣಿಸುತ್ತಿದ್ದ. ಆತನ ಪಕ್ಕದ ವಿಂಡೋ ಸೀಟ್ ನಲ್ಲಿ 22 ವರ್ಷದ ಯುವತಿ ಕುಳಿತಿದ್ಲು. ಹಾಗೇ ಆಕೆ ನಿದ್ದೆ ಹೋಗಿದ್ಲು. ಎಚ್ಚರವಾಗುವಷ್ಟರಲ್ಲಿ ತನ್ನ ಶರ್ಟ್ ಮತ್ತು ಪ್ಯಾಂಟ್ ಬಟನ್ ಬಿಚ್ಚಿತ್ತು. ಆತನ ಕೈ ನನ್ನ ಪ್ಯಾಂಟ್ ನೊಳಗಿತ್ತು ಅಂತಾ ಯುವತಿ ಆರೋಪ ಮಾಡಿದ್ದಾಳೆ.

ಬೆಳಗ್ಗೆ 5.30ರ ವೇಳೆಗೆ ಈ ಘಟನೆ ನಡೆದಿತ್ತು. ಪ್ಲೇನ್ ಲ್ಯಾಂಡ್ ಆಗಲು ಇನ್ನೂ 40 ನಿಮಿಷ ಬಾಕಿ ಇತ್ತು. ಆದ್ರೆ ಪ್ರಭು ರಾಮಮೂರ್ತಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ಯುವತಿಯೇ ನನ್ನ ತೊಡೆಯ ಮೇಲೆ ಮಲಗಿದ್ಲು, ಸೀಟು ಬದಲಾಯಿಸುವಂತೆ ವಿಮಾನ ಸಿಬ್ಬಂದಿಗೆ ಮನವಿ ಮಾಡಿದ್ರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...