alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸ್ಟರ್ಬ್ ಮಾಡಿದ್ದಕ್ಕೆ 2 ವರ್ಷದ ಮಗು ಕೊಂದ ಅಪ್ಪ

us ap 28

ಹ್ಯೂಸ್ಟನ್: ಕಂಪ್ಯೂಟರ್, ಮೊಬೈಲ್, ಇಂಟರ್ ನೆಟ್, ಸಾಮಾಜಿಕ ಜಾಲತಾಣ, ಗೇಮ್ ಇವುಗಳಲ್ಲೇ ಹೆಚ್ಚಾಗಿ ಕಾಲಕಳೆಯುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ಕೆಲವರಂತೂ ಕಂಪ್ಯೂಟರ್ ಗೇಮ್ ನಲ್ಲಿಯೇ ಮುಳುಗಿ ಹೋಗಿರುತ್ತಾರೆ.

ಹೀಗೆ ಕಂಪ್ಯೂಟರ್ ಗೇಮ್ ಆಡುವುದರಲ್ಲೇ, ಹೆಚ್ಚಿನ ಕಾಲ ಕಳೆಯುತ್ತಿದ್ದ ವ್ಯಕ್ತಿಯೊಬ್ಬ, ಗೇಮ್ ಆಡುವ ಸಂದರ್ಭದಲ್ಲಿ 2 ವರ್ಷದ ಮಗಳು ಕಾಡಿದ್ದರಿಂದ, ಕೊಲೆ ಮಾಡಿದ ಘಟನೆ ಅಮೆರಿಕದ ಟೆಕ್ಸಾಸ್ ನಲ್ಲಿ ನಡೆದಿದೆ. 31 ವರ್ಷದ ಆಂತೋಣಿ ಮೈಕೆಲ್ ಸ್ಯಾಂಡರ್ಸ್ ಮಗಳನ್ನು ಕೊಲೆ ಮಾಡಿದ ಕಟುಕ. ಈತನ ಪತ್ನಿ, ಮನೆಯಲ್ಲಿ 2 ವರ್ಷದ ಮಗಳು, 5 ವರ್ಷದ ಮಗನನ್ನು ಬಿಟ್ಟು ಶಾಪಿಂಗ್ ಮಾಡಲು ಹೋಗಿದ್ದಾಳೆ. ಮನೆಯಲ್ಲಿ ಮೈಕೆಲ್ ಗೇಮ್ ಆಡುತ್ತಿರುವಾಗ ಮಗಳು ಅಡ್ಡಿಪಡಿಸಿದ್ದಾಳೆ.

ಇದರಿಂದ ಆಕ್ರೋಶಗೊಂಡ ಆತ, ಮಗಳನ್ನು ಕೊಲೆ ಮಾಡಿದ್ದಾನೆ. ಕಳೆದ ಡಿಸೆಂಬರ್ ನಲ್ಲಿ ಘಟನೆ ನಡೆದಿದ್ದು, ಟೆಕ್ಸಾಸ್ ನ ವಾಟುಗಾ ಪೊಲೀಸರು, ಸಾವಿನ ತನಿಖೆ ಕೈಗೊಂಡಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮೈಮೇಲೆ ಹಲ್ಲೆ ಮಾಡಿದ ಗುರುತು ಇದ್ದು, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿಸಲಾಗಿತ್ತು.

ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಮೈಕೆಲ್, ಗೇಮ್ ಆಡುವಾಗ ಅಡ್ಡಿಪಡಿಸಿದ ಕಾರಣಕ್ಕೆ, ಮಗಳನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...