alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ಸಾಗಣೆಗೆ ಬಳಕೆಯಾಗಿದೆ ಸೇನೆಯ ನಕಲಿ ಪರ್ಮಿಟ್

ಬಿಹಾರದಲ್ಲಿ ಮದ್ಯ ಮಾರಾಟವನ್ನೇ ನಿಷೇಧಿಸಲಾಗಿದೆ. ಆದ್ರೂ ದಂಧೆಕೋರರು ಮದ್ಯ ಸಾಗಣೆಗೆ ಹೊಸ ಮಾರ್ಗ ಹುಡುಕಿಕೊಂಡಿದ್ದಾರೆ. ಹರಿಯಾಣದಲ್ಲಿ ತಯಾರಾಗಿದ್ದ ಮದ್ಯ ಹೊತ್ತು ಬಂದಿದ್ದ ಲಾರಿಯನ್ನು ಗೋಪಾಲ್ ಗಂಜ್ ಹೆದ್ದಾರಿಯಲ್ಲಿ ಅಬಕಾರಿ ಅಧಿಕಾರಿಗಳು ತಡೆದಿದ್ರು.

ಅಕ್ರಮವಾಗಿ ಮದ್ಯ ಸಾಗಿಸಲಾಗ್ತಿದೆ ಅನ್ನೋ ಅನುಮಾನದ ಮೇಲೆ ಪರಿಶೀಲನೆ ನಡೆಸಿದ್ರು. ಆದ್ರೆ ಅವರ ಬಳಿ Central Stores Depot ನೀಡಿದ್ದ ಪರವಾನಿಗೆಯಿತ್ತು. ಆದ್ರೆ CSD ಕೇವಲ ಸಶಸ್ತ್ರ ಪಡೆಗಳಿಗೆ ಮಾತ್ರ ಮದ್ಯ ಸಾಗಣೆಗೆ ಅನುಮತಿ ನೀಡುತ್ತದೆ.

ಅಂಥದ್ರಲ್ಲಿ ಇವರಿಗೆ ಪರ್ಮಿಟ್ ಸಿಕ್ಕಿದ್ಹೇಗೆ ಅನ್ನೋ ಗೊಂದಲದಲ್ಲಿ ಅಬಕಾರಿ ಅಧಿಕಾರಿಗಳು ಬಿದ್ದಿದ್ರು. ಇದೇ ಸಮಯಕ್ಕೆ ಕಾಯುತ್ತಿದ್ದ ಲಾರಿ ಚಾಲಕ ಹಾಗೂ ಕ್ಲೀನರ್ ಎಸ್ಕೇಪ್ ಆಗಿದ್ದಾರೆ. ಅದರ ಅರ್ಥ ಕಳೆದ ಕೆಲ ತಿಂಗಳುಗಳಿಂದ ಮದ್ಯ ಸಾಗಣೆಗೆ ದಂಧೆಕೋರರು ನಕಲಿ ಪರ್ಮಿಟ್ ಬಳಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...