alex Certify
ಕನ್ನಡ ದುನಿಯಾ       Mobile App
       

Kannada Duniya

ಒಪ್ಪಂದಕ್ಕೆ ಒಪ್ಪದ ಪತಿ ಮೇಲೆ ಆಸಿಡ್ ದಾಳಿ ನಡೆಸಿದ್ಲು 2ನೇ ಪತ್ನಿ

ಮಹಿಳೆಯರ ಮೇಲೆ ಅನೇಕ ಬಾರಿ ಆಸಿಡ್ ದಾಳಿ ನಡೆದಿದೆ. ಇದೇ ಮೊದಲ ಬಾರಿ ಮಹಿಳೆಯೊಬ್ಬಳು ಪುರುಷನ ಮೇಲೆ ಆಸಿಡ್ ದಾಳಿ ನಡೆಸಿದ್ದಾಳೆ. ಉತ್ತರಾಖಂಡದ ಪಿಲಿಬಿತ್ ನಲ್ಲಿ ಆಘಾತಕಾರಿ ಘಟನೆ ಬಹಿರಂಗವಾಗಿದೆ.

ಆಸಿಡ್ ದಾಳಿ ನಡೆಸಿದ ಮಹಿಳೆ ಪೀಡಿತನ ಎರಡನೇ ಪತ್ನಿ ಎನ್ನಲಾಗಿದೆ. ಇಬ್ಬರ ನಡುವೆ ಅನೇಕ ದಿನಗಳಿಂದ ವಿವಾದ ನಡೆಯುತ್ತಿತ್ತು. ಪೀಡಿತ ಶೇಕಡಾ 20-30ರಷ್ಟು ಸುಟ್ಟು ಹೋಗಿದ್ದಾನೆಂದು ವೈದ್ಯರು ಹೇಳಿದ್ದಾರೆ. ಪೀಡಿತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಪೀಡಿತ ಫರ್ಹದ್ ಮಾರುಕಟ್ಟೆಗೆ ಹೋದಾಗ ಅಲ್ಲಿಗೆ ಬಂದ ಎರಡನೇ ಪತ್ನಿ ಪರ್ವೀನ್ ಯಾವುದೋ ಕೇಸ್ ಬಗ್ಗೆ ಮಾತನಾಡಿದ್ದಾಳೆ. ಫರ್ಹದ್ ಇದಕ್ಕೆ ಒಪ್ಪಿಗೆ ನೀಡಿಲ್ಲ. ಕೋಪಗೊಂಡ ಮಹಿಳೆ ತಂದಿದ್ದ ಪಿಚಕಾರಿಯಿಂದ ಆಸಿಡ್ ದಾಳಿ ನಡೆಸಿದ್ದಾಳೆ.

2017ರಲ್ಲಿ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತಂತೆ. ಮದುವೆಯಾಗುವಂತೆ ಪರ್ವೀನ್ ಒತ್ತಾಯ ಮಾಡುತ್ತಿದ್ದಳಂತೆ. ಇದಕ್ಕೆ ಒಪ್ಪದ ಫರ್ಹದ್ ಮೇಲೆ ಚಾಕು ದಾಳಿ ನಡೆಸಿದ್ದಳಂತೆ. ಪರ್ವೀನ್ ವಿರುದ್ಧ ದೂರು ದಾಖಲಿಸಿದ್ದ ಫರ್ಹದ್, ಪರ್ವೀನ್ ನನ್ನು ಜೈಲಿಗಟ್ಟಿದ್ದ. ಶಿಕ್ಷೆ ಮುಗಿಸಿ ವಾಪಸ್ ಬಂದಿದ್ದ ಪರ್ವೀನ್ ಮತ್ತೆ ಮದುವೆ ಒತ್ತಡ ಹೇರಿದ್ದಳಂತೆ. 2018ರಲ್ಲಿ ಫರ್ಹದ್ ಮದುವೆಯಾಗಿದ್ದ. ಆದ್ರೆ ಕೆಲವೇ ತಿಂಗಳಲ್ಲಿ ಮತ್ತೆ ಗಲಾಟೆ ಶುರುವಾಗಿತ್ತು. ಪರ್ವೀನ್ ಪರ ಪುರುಷನ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ಆಕೆಯಿಂದ ಫರ್ಹದ್ ದೂರವಿದ್ದನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...