alex Certify
ಕನ್ನಡ ದುನಿಯಾ       Mobile App
       

Kannada Duniya

ವಾಂಟೆಡ್ ಕ್ರಿಮಿನಲ್ ಗೆ ಸನ್ಮಾನ ಮಾಡಿದೆ ಖಾಕಿ ಪಡೆ

ಸಾರ್ವಜನಿಕರಿಗೆ ಕೊಲೆ ಬೆದರಿಕೆ ಹಾಕೋದು, ಹಲ್ಲೆ ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನನ್ನು ಉತ್ತರ ಪ್ರದೇಶದ ಮೀರತ್ ಪೊಲೀಸರು ಸನ್ಮಾನಿಸಿದ್ದಾರೆ. ಅಪರಾಧ ಜಗತ್ತನ್ನು ತೊರೆದಿದ್ದಾರೆಂದು ಹೇಳಿ 15 ಕ್ರಿಮಿನಲ್ ಗಳಿಗೆ ಪೊಲೀಸರು ಸನ್ಮಾನ ಮಾಡಿದ್ರು.

ಇವರ ಪೈಕಿ ಒಬ್ಬ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ. ಇಮ್ರಾನ್ ಎಂಬಾತನ ವಿರುದ್ಧ ಹತ್ತಾರು ಕೇಸ್ ಗಳು ದಾಖಲಾಗಿದ್ದವು. ನಂತರ ಪೊಲೀಸರಿಗೆ ತಾವು ಮಾಡಿದ ಯಡವಟ್ಟಿನ ಅರಿವಾಗಿದೆ, ಸನ್ಮಾನ ಮಾಡಿಸಿಕೊಂಡವರಲ್ಲೊಬ್ಬ ಖತರ್ನಾಕ್ ಕ್ರಿಮಿನಲ್ ಇದ್ದಾನೆ ಅನ್ನೋದು ಗೊತ್ತಾಗಿದೆ.

ಈ ತಪ್ಪನ್ನು ಮುಚ್ಚಿ ಹಾಕಲು ಪೊಲೀಸರು ಕೊನೆಗೆ ಇಮ್ರಾನ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಲಿಸರಿ ಗೇಟ್ ಪೊಲೀಸ್ ಠಾಣೆಯಲ್ಲಿ ಒಟ್ಟು 15 ಜನರಿಗೆ ಹಾರ ಹಾಕಿ ಸನ್ಮಾನ ಮಾಡಲಾಗಿದೆ. ನಂತರ ಎಲ್ಲರಿಗೂ ಚಹಾ, ತಿಂಡಿ ವಿತರಿಸಲಾಯ್ತು. ರೌಡಿ ಇಮ್ರಾನ್ ಕೂಡ ಹಾರ ಹಾಕಿಸಿಕೊಂಡು ರುಚಿಯಾದ ತಿನಿಸುಗಳನ್ನು ಸವಿದಿದ್ದಾನೆ. ಈ ಘಟನೆ ಬಗ್ಗೆ ತನಿಖೆಗೂ ಆದೇಶಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...