alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್ ನನ್ನೇ ಕೊಂದ ಡ್ರೈವರ್

ಬಸ್ ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರದಲ್ಲಿ ಆರಂಭವಾದ ಚಿಕ್ಕ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿದೆ. ದೆಹಲಿಯ ಜರೋದಾ ಕಲನ್ ಎಂಬಲ್ಲಿ ಖಾಸಗಿ ಬಸ್ ಕಂಡಕ್ಟರ್ 23 ವರ್ಷದ ಜಿತೇಂದ್ರ ಎಂಬಾತನನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

ಖಾಸಗಿ ಬಸ್ ನಲ್ಲಿ ಜಿತೇಂದ್ರ ಕಂಡಕ್ಟರ್ ಆಗಿದ್ದರೆ, ಸುಧೀರ್ ಡ್ರೈವರ್ ಆಗಿದ್ದ. ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರದಲ್ಲಿ ಕಳೆದ 2 ವರ್ಷಗಳಿಂದ ಆಗಾಗ್ಗೆ ಇಬ್ಬರೂ ಜಗಳವಾಡುತ್ತಿದ್ದರು. ಮೊನ್ನೆ ಬೈಕ್ ನಲ್ಲಿ ಬಂದ ಮೂವರು 6 ಸುತ್ತು ಗುಂಡು ಹಾರಿಸಿ ಜಿತೇಂದ್ರನನ್ನು ಕೊಲೆ ಮಾಡಿದ್ದಾರೆ. ಆಸ್ಪತ್ರೆಗೆ ಸೇರಿಸುವ ಮುನ್ನವೇ ಜಿತೇಂದ್ರ ಸಾವನ್ನಪ್ಪಿದ್ದಾನೆ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ 38 ವರ್ಷದ ಸುಧೀರ್ ನನ್ನು ಬಂಧಿಸಿರುವ ಪೊಲೀಸರು ತಪ್ಪಿಸಿಕೊಂಡ ಉಳಿದಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...