alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಚಲಾಯಿಸಿ ಆಟೋ ಚಾಲಕನನ್ನು ಬಲಿ ಪಡೆದ 17ರ ಪೋರ

ದೆಹಲಿಯ ಕಸ್ತೂರಬಾ ಗಾಂಧಿ ಮಾರ್ಗದಲ್ಲಿ 17 ವರ್ಷದ ಹುಡುಗನೊಬ್ಬ ಕಾರು ಹರಿಸಿ ಆಟೋ ಚಾಲಕನ ಸಾವಿಗೆ ಕಾರಣನಾಗಿದ್ದಾನೆ. ಸ್ನೇಹಿತರ ಜೊತೆಗೆ ಬಾಲಕ ಮಾರುತಿ ಸಿಯಾಜ್ ಕಾರನ್ನು ಚಲಾಯಿಸಿಕೊಂಡು ಬಂದಿದ್ದ. ಕಾರಿನಲ್ಲಿದ್ದವರೆಲ್ಲರೂ ಅಪ್ರಾಪ್ತರು.

ಬಾಲಕನ ಚಿಕ್ಕಪ್ಪನಿಗೆ ಸೇರಿದ ಕಾರು ಅದು. ಅಪ್ರಾಪ್ತನಿಗೆ ಕಾರಿನ ಕೀಲಿ ಕೊಟ್ಟಿದ್ದಕ್ಕೆ ಆತನ ವಿರುದ್ಧವೂ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಸಿಗ್ನಲ್ ಜಂಪ್ ಮಾಡಿದ ಬಾಲಕ ಕಾರನ್ನು ಮುಂದೆ ನಿಂತಿದ್ದ ಆಟೋ ರಿಕ್ಷಾಗೆ ಗುದ್ದಿದ್ದಾನೆ.

ಆ ರಭಸಕ್ಕೆ ಆಟೋದಲ್ಲಿದ್ದ 66 ವರ್ಷದ ಚಾಲಕ ಶಿವ ಶಂಕರ್ ಮಹತೋ ಹಲವು ಮೀಟರ್ ದೂರಕ್ಕೆ ಹೋಗಿ ಬಿದ್ದಿದ್ದ. ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರು ಚಲಾಯಿಸುತ್ತಿದ್ದ ಅಪ್ರಾಪ್ತನಿಗೆ ಸಹ ತಲೆಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...