alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದ್ಯೋಗಿಯನ್ನೇ ಕೊಂದು ಫ್ರಿಡ್ಜ್ ನಲ್ಲಿಟ್ಟಿದ್ದ ವಾಯುಸೇನೆ ಅಧಿಕಾರಿ

kill

ಪಂಜಾಬ್ ನಲ್ಲಿ ಭಾರತೀಯ ವಾಯುಸೇನೆ ಅಧಿಕಾರಿಯೊಬ್ಬ ತನ್ನ ಪತ್ನಿಯ ಜೊತೆಗೆ ಸೇರಿಕೊಂಡು ಸಹೋದ್ಯೋಗಿಯನ್ನೇ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಕೊಲೆಯಾದ ಯುವಕ ವಿಪಿನ್ ಶುಕ್ಲಾ ಉತ್ತರಪ್ರದೇಶದ ಗೊಂಡಾ ಮೂಲದವನು. 2009ರಲ್ಲಿ ವಾಯುಸೇನೆ ಸೇರಿದ್ದ, 2014ರಲ್ಲಿ ಪಂಜಾಬ್ ನ ಭಿಸಿಯಾನಾ ಸ್ಟೇಶನ್ ಗೆ ವರ್ಗಾವಣೆಗೊಂಡಿದ್ದ.

ಫೆಬ್ರವರಿ 8 ರಿಂದ್ಲೂ ವಿಪಿನ್ ನಾಪತ್ತೆಯಾಗಿದ್ದ. ಪತ್ನಿ ಕುಂಕುಮ್ ಪೊಲೀಸರಿಗೆ ದೂರು ನೀಡಿದ್ಲು, ಅಪಹರಣ ಪ್ರಕರಣ ದಾಖಲು ಮಾಡಲಾಗಿತ್ತು. ತನಿಖೆ ವೇಳೆ ಏರ್ ಫೋರ್ಸ್ ಸಾರ್ಜೆಂಟ್ ಸುಲೇಶ್ ಶುಕ್ಲಾ ಮನೆಯಲ್ಲಿ ಪೊಲೀಸರಿಗೆ ಕೊಳೆತ ವಾಸನೆ ಬಂದಿತ್ತು. ಶೋಧ ನಡೆಸಿದಾಗ ತುಂಡಾಗಿ ಕತ್ತರಿಸಿದ್ದ ಶುಕ್ಲಾ ದೇಹದ ತುಣುಕುಗಳು ಸಿಕ್ಕಿವೆ.

ಕೊನೆಗೆ ತಪ್ಪೊಪ್ಪಿಕೊಂಡ ಸುಲೇಶ್ ತಾನೇ ಶುಕ್ಲಾನನ್ನು ಕೊಲೆ ಮಾಡಿರೋದಾಗಿ ಹೇಳಿದ್ದಾನೆ. ತನ್ನ ಪತ್ನಿ ಅನುರಾಧಾ ಜೊತೆಗೆ ಶುಕ್ಲಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರಿಂದ ಈ ಕೃತ್ಯ ಎಸಗಿರೋದಾಗಿ ಒಪ್ಪಿಕೊಂಡಿದ್ದಾನೆ. ಅನುರಾಧಾ ಗರ್ಭಿಣಿಯಾಗಿದ್ಲು, ತನ್ನನ್ನು ಮದುವೆಯಾಗುವಂತೆ ವಿಪಿನ್ ಬಳಿ ಕೇಳಿದ್ದಾಳೆ. ಆದ್ರೆ ಅದಕ್ಕೊಪ್ಪದ ಆತ, ಇಬ್ಬರ ಅಕ್ರಮ ಸಂಬಂಧದ ಬಗ್ಗೆ ಎಲ್ಲರ ಬಳಿಯೂ ಹೇಳಿಕೊಂಡು ತಿರುಗುತ್ತಿದ್ದ. ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಸುಲೇಶ್, ಆತನ ಸಹೋದರ ಹಾಗೂ ಅನುರಾಧಾ ಸ್ಕೆಚ್ ಹಾಕಿದ್ರು.

ಫೆಬ್ರವರಿ 8ರಂದು ಶುಕ್ಲಾಗೆ ಕರೆ ಮಾಡಿದ್ದ ಸುಲೇಶ್, ಮನೆ ಬದಲಾಯಿಸುತ್ತಿದ್ದೇನೆ ಪ್ಯಾಕಿಂಗ್ ಗೆ ಸಹಾಯ ಮಾಡು ಎಂದಿದ್ದ. ಮನೆಗೆ ಬಂದ ಶುಕ್ಲಾನನ್ನು ಹತ್ಯೆ ಮಾಡಿದ್ದರು. ಅವನ ಮೃತದೇಹವನ್ನು ಬಾಕ್ಸ್ ನಲ್ಲಿ ತುಂಬಿಸಿಕೊಂಡು ಸುಲೇಶ್ ತನ್ನ ಹೊಸ ಕ್ವಾಟ್ರಸ್ ಗೆ ಕೊಂಡೊಯ್ದಿದ್ದ. ಫೆಬ್ರವರಿ 19ರಂದು ಸುಲೇಶ್, ಶುಕ್ಲಾ ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ 16 ಪಾಲಿಥಿನ್ ಬ್ಯಾಗ್ ಗಳಲ್ಲಿ ತುಂಬಿಸಿದ್ದ. ಅದರಲ್ಲಿ ಕೆಲವನ್ನು ಫ್ರಿಡ್ಜ್ ನಲ್ಲಿ ಹಾಗೂ ಇನ್ನು ಕೆಲವನ್ನು ವಾರ್ಡ್ ರೋಬ್ನಲ್ಲಿ ಇಟ್ಟಿದ್ದ. ಸುಲೇಶ್ ಮತ್ತವನ ಪತ್ನಿಯನ್ನು ಬಂಧಿಸಿರುವ ಪೊಲೀಸರು, ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...