alex Certify
ಕನ್ನಡ ದುನಿಯಾ       Mobile App
       

Kannada Duniya

ಚರ್ಮ ರೋಗದ ಪತಿ ಮೇಲೆ ಹೀಗೆ ಸೇಡು ತೀರಿಸಿಕೊಂಡ್ಲು ಗರ್ಭಿಣಿ ಪತ್ನಿ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಗರ್ಭಿಣಿಯೊಬ್ಬಳು ತನ್ನ ಪತಿಯನ್ನು ಹತ್ಯೆಗೈದಿದ್ದಾಳೆ. ಸೋಮವಾರ ರಾತ್ರಿ ಬೆಡ್ ರೂಂನಲ್ಲಿ ಮಾರಕಾಸ್ತ್ರಗಳಿಂದ ಪತಿ ಮೇಲೆ ದಾಳಿ ನಡೆಸಿ, ಕೊಲೆ ಮಾಡಿದ್ದಾಳೆ. ಮಂಗಳವಾರ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು, ಆರೋಪಿ ಸತ್ಯ ಒಪ್ಪಿಕೊಂಡಿದ್ದಾಳೆ. ಆಕೆ ಕೊಲೆಗೆ ಹೇಳಿದ ಕಾರಣ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಆರೋಪಿ ಗರ್ಭಿಣಿ ನೀತು ಪತಿಯನ್ನು ಹತ್ಯೆ ಮಾಡಿ ಏನೂ ಆಗಿಲ್ಲವೆನ್ನುವಂತೆ ಎದ್ದು ಕೆಳಗೆ ಬಂದಿದ್ದಳು. ನಂತ್ರ ಮನೆಯವರು  ನೀರಜ್ ಕೋಣೆಗೆ ಹೋದಾಗ ಸತ್ಯ ಬಹಿರಂಗವಾಗಿದೆ. ನೀತು ಮೇಲೆ ನೀರಜ್ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ರು. ಈ ವೇಳೆ ನೀತು ಸತ್ಯ ಒಪ್ಪಿಕೊಂಡಿದ್ದಾಳೆ.

ನೀತುಗೆ ನೀರಜ್ ಜೊತೆ ಮದುವೆಯಾಗುವುದು ಇಷ್ಟವಿರಲಿಲ್ಲವಂತೆ. ನೀರಜ್ ಚರ್ಮ ರೋಗದಿಂದ ಬಳಲುತ್ತಿದ್ದನಂತೆ. ಆತ ಹತ್ತಿರ ಬಂದ್ರೆ ನೀತುಗೆ ಹಿಂಸೆಯಾಗ್ತಿತ್ತಂತೆ. ಇದೇ ಕಾರಣಕ್ಕೆ ನೀತು ನೀರಜ್ ನನ್ನು ಹತ್ಯೆಗೈದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...