alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! ಮಗನಿಂದಲೇ ಹತಳಾದಳು ತಾಯಿ

ನಿಜಕ್ಕೂ ಇದೊಂದು ಅಮಾನವೀಯ ಘಟನೆ. ಮಗನೇ ತನ್ನ ತಾಯಿಯನ್ನ ಚಾಕುವಿನಿಂದ ಇರಿದು ಕೊಂದ ಘಟನೆ ಆಂಧ್ರ ರಾಜಧಾನಿ ಹೈದ್ರಾಬಾದ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷದ ಮದನ್ ಎಂಬ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ .

ತಾಯಿ ಮತ್ತು ಮಗನ ನಡುವೆ ನಡೆದ ಗಲಾಟೆಯೇ ಇದಕ್ಕೆ ಕಾರಣ ಅನ್ನೋ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮದನ್ ತಾಯಿ ಚಿಟ್ ಫಂಡ್ ವ್ಯವಹಾರವನ್ನ ನಡೆಸ್ತಾ ಇದ್ದರು. ಆ ಹಣವನ್ನೆಲ್ಲಾ ಅವರು ಮಗಳ ಮದುವೆಗಾಗಿ ಬಳಸಿಕೊಂಡುಬಿಟ್ಟಿದ್ದರು.

ಅಲ್ಲದೇ ಚಿಟ್ ಫಂಡ್ ಬ್ಯುಸಿನೆಸ್ ನಷ್ಟದಲ್ಲಿ ನಡೀತಿತ್ತು. ಚಿಟ್ ಫಂಡ್ ನಲ್ಲಿ ಹಣ ಹೂಡಿದ್ದ ಗ್ರಾಹಕರು ಹಣ ವಾಪಸ್ಸು ಕೊಡುವಂತೆ ತಾಯಿ ಮತ್ತು ಮಗನನ್ನ ಒತ್ತಾಯಿಸುತ್ತಿದ್ದರು.
ಈ ವಿಚಾರಕ್ಕೆ ಹಲವು ಬಾರಿ ಮದನ್ ಮತ್ತು ಆತನ ತಾಯಿಯ ನಡುವೆ ಗಲಾಟೆ ನಡೆದಿತ್ತು.

ಈ ಸಂಬಂಧ ಮದನ್ ತಾಯಿ ಮನೆ ಬಿಟ್ಟು ತನ್ನ ಸೋದರನ ಮನೆಯಲ್ಲಿ ನೆಲೆಸಿದ್ದರು. ತಾಯಿಯನ್ನ ಮನೆಗೆ ವಾಪಸ್ಸು ಕರೆತಂದ ಮದನ್ ಹಣಕಾಸಿನ ವಿಚಾರಕ್ಕೆ ಜಗಳ ತೆಗೆದು ತಾಯಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...