alex Certify
ಕನ್ನಡ ದುನಿಯಾ       Mobile App
       

Kannada Duniya

ಫೋನ್ ಗಾಗಿ ಪ್ರಾಣವನ್ನೇ ಕಳೆದುಕೊಂಡಳು

suicide by hanging 234ತಾನು ಖರೀದಿಸಿದ್ದ ಹೊಸ ಮೊಬೈಲ್ ಫೋನ್ ಕಳೆದುಕೊಂಡ ಸಂದರ್ಭದಲ್ಲಿ ತನ್ನ ತಾಯಿ ಬೈದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಯುವತಿಯೊಬ್ಬಳು ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಬ್ಯೂಟಿಪಾರ್ಲರ್ ಒಂದರಲ್ಲಿ ಬ್ಯೂಟಿಶಿಯನ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ಸುಲ್ತಾನಾ ಬೇಗಂ ನೇಣು ಹಾಕಿಕೊಂಡು ಸಾವನ್ನಪ್ಪಿದವಳಾಗಿದ್ದು, ಈಕೆ ಕಳೆದ ತಿಂಗಳು ಹೊಸ ಮೊಬೈಲ್ ಫೋನ್ ಖರೀದಿಸಿದ್ದಳೆನ್ನಲಾಗಿದೆ.

ಸುಲ್ತಾನಾ ಬೇಗಂ ಇತ್ತೀಚೆಗೆ ಅದನ್ನು ಕಳೆದುಕೊಂಡಿದ್ದು, ಆಕೆಯ ನಿರ್ಲಕ್ಷ್ಯದ ಕುರಿತು ತಾಯಿ ಜುಬೀಯಾನಾ ಬೇಗಂ ಬೈದಿದ್ದರೆಂದು ಹೇಳಲಾಗಿದೆ. ಇದರಿಂದ ಮನನೊಂದಿದ್ದ ಸುಲ್ತಾನಾ ಬೇಗಂ, ಬುಧವಾರ ರಾತ್ರಿ ತನ್ನ ಮನೆಯಲ್ಲಿಯೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾಳೆ. ಈ ಕುರಿತು ಫಲುಕಾನುಮಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...