alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ಮಕ್ಕಳ ಕಾರ್ ಕ್ರೇಝ್ ತಂತು ಆಪತ್ತು..!

suv

ಹೈದ್ರಾಬಾದ್ ನಲ್ಲಿ ಸ್ಪೋರ್ಟ್ಸ್ ಕಾರ್ SUV ಓಡಿಸಿದ ಶಾಲಾ ವಿದ್ಯಾರ್ಥಿಯೊಬ್ಬ ಅಪಘಾತಕ್ಕೆ ಕಾರಣನಾಗಿದ್ದಾನೆ. ಸ್ಕೂಟರ್ ನಲ್ಲಿ ಹೋಗ್ತಾ ಇದ್ದ ಟೆಕ್ಕಿ, ಮತ್ತಾತನ ಪತ್ನಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಅವರಿಬ್ರೂ ಗಾಯಗೊಂಡಿದ್ದಾರೆ, ಆದ್ರೆ ಕಾರು ಚಲಾಯಿಸ್ತಾ ಇದ್ದ ಬಾಲಕ ಮಾತ್ರ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಪ್ರಗತಿ ನಗರದ 6 ಹುಡುಗರು ಆ ಕಾರಿನಲ್ಲಿ ಪ್ರಯಾಣಿಸ್ತಾ ಇದ್ರು. ಕಾರು ಓಡಿಸ್ತಾ ಇದ್ದವನು ಕೂಡ ಚಿಕ್ಕವಯಸ್ಸಿನ ಹುಡುಗ, ಅತಿ ವೇಗವಾಗಿ ಡ್ರೈವ್ ಮಾಡ್ತಾ ಇದ್ದ. ಮಿಥಿಲಾ ನಗರದ ಬಳಿ ನಿಯಂತ್ರಣ ತಪ್ಪಿದ ಕಾರು ಎದುರಿನಿಂದ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

ಸ್ಕೂಟರ್ ನಲ್ಲಿದ್ದ ನಾಗೇಂದ್ರ ಕುಮಾರ್ ಮತ್ತವರ ಪತ್ನಿ ದೇವಿ ದೂರಕ್ಕೆ ಹೋಗಿ ಬಿದ್ದಿದ್ದಾರೆ. ಸ್ಕೂಟರ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಆದ್ರೆ ಅಪಘಾತದ ನಂತರವೂ ಹುಡುಗರು ಕಾರು ನಿಲ್ಲಿಸಿಲ್ಲ, ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಅವರೆಲ್ಲ ಬಾಚುಪಲ್ಲಿಯ ಸ್ಕೂಲ್ ವಿದ್ಯಾರ್ಥಿಗಳು ಅಂತಾ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ನಾಗೇಂದ್ರ ಅವರ ಕಾಲು ಹಾಗೂ ಕೈ ಫ್ರಾಕ್ಚರ್ ಆಗಿದ್ದು, ಪತ್ನಿ ದೇವಿ ಅವರ ತಲೆಗೆ ಗಂಭೀರ ಏಟಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...