alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಯಾಂಗ್ ಸ್ಟರ್ ಜೊತೆ ಪೊಲೀಸ್ ಅಧಿಕಾರಿಗಳ ದೋಸ್ತಿ!

gangster

ಪೊಲೀಸ್ ಅಧಿಕಾರಿಗಳು ಹೈದ್ರಾಬಾದ್ ನ ಕುಖ್ಯಾತ ದರೋಡೆಕೋರ ನಯೀಮುದ್ದೀನ್ ಜೊತೆಗಿರುವ ಫೋಟೋ ವೈರಲ್ ಆಗಿದೆ. ಸಿಐಡಿಯ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಮಡ್ಡಿಪತಿ ಶ್ರೀನಿವಾಸ್ ರಾವ್, ಗ್ಯಾಂಗ್ ಸ್ಟರ್ ಜೊತೆ ಕುಳಿತು ಊಟ ಮಾಡ್ತಾ ಇರೋ ಫೋಟೋ ಎಲ್ಲಾ ಕಡೆ ಹರಿದಾಡ್ತಾ ಇದೆ.

ಇನ್ನೊಂದು ಫೋಟೋದಲ್ಲಿ ಮಲಕ್ಪೇಟ್ ಟ್ರಾಫಿಕ್ ಇನ್ಸ್ ಪೆಕ್ಟರ್ ಕೆ.ವೆಂಕಟರೆಡ್ಡಿ ಕೂಡ ನಯೀಮುದ್ದೀನ್ ಜೊತೆಗೆ ಹರಟೆ ಹೊಡೆಯುತ್ತಿದ್ದಾರೆ. ಈ ಫೋಟೋ ಬಗ್ಗೆ ತಮಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ ಶ್ರೀನಿವಾಸ ರಾವ್, ದರೋಡೆಕೋರನಿಗೂ ತಮಗೂ ಯಾವುದೇ ಸಂಬಂಧವಿಲ್ಲ ಅಂತಾ ವಾದಿಸ್ತಿದ್ದಾರೆ.

ನಯೀಮ್, ಪದವಿ ಓದ್ತಿದ್ದಾಗ ವೆಂಕಟರೆಡ್ಡಿ ಅವರ ಸಹಪಾಠಿಯಾಗಿದ್ದನಂತೆ. 2005ರಲ್ಲಿ ತನ್ನ ಸಂಬಂಧಿಕರ ಮದುವೆಗೆ ಇನ್ಸ್ ಪೆಕ್ಟರ್ ವೆಂಕಟ ರೆಡ್ಡಿಗೂ ಆತ ಆಹ್ವಾನ ಕೊಟ್ಟಿದ್ದ. ಆ ಸಮಾರಂಭದಲ್ಲಿ ತೆಗೆದ ಫೋಟೋ ಇದು ಅಂತಾ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಎಸ್ ಐ ಟಿ ಅಧಿಕಾರಿಗಳು ಇದುವರೆಗೆ 11 ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...