alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಬೃಹತ್ ಸೆಕ್ಸ್ ರ್ಯಾಕೆಟ್ ಜಾಲ

sex-racket-storyಹೈದರಾಬಾದ್ ಪೊಲೀಸರು ಬೃಹತ್ ಸೆಕ್ಸ್ ರ್ಯಾಕೆಟ್ ಜಾಲವನ್ನು ಬಯಲಿಗೆಳೆದಿದ್ದಾರೆ. ಆನ್ ಲೈನ್ ನಲ್ಲಿ ಕಾರ್ಪೋರೇಟ್ ಉದ್ಯಮದಂತೆ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕರಾಳ ದಂಧೆಯ ಆಳ- ಅಗಲವನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ತಮಗೆ ಸಿಕ್ಕಿದ್ದ ಮಾಹಿತಿ ಮೇರೆಗೆ ಪೊಲೀಸ್ ಪೇದೆಯೊಬ್ಬರನ್ನು ಗ್ರಾಹಕರಂತೆ ಕಳುಹಿಸಿದ್ದ ಪೊಲೀಸರು, ಆತ ನೀಡಿದ ಸುಳಿವಿನ ಬಳಿಕ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಯುವತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಇವರುಗಳ ಜಾಲಕ್ಕೆ ಸಿಕ್ಕಿ ಬಿದ್ದಿದ್ದ ಉತ್ತರ ಪ್ರದೇಶ ಹಾಗೂ ಹರಿಯಾಣ ಮೂಲದ ಐವರು ಯುವತಿಯರನ್ನು ರಕ್ಷಿಸಿದ್ದಾರೆ.

ಪ್ರಕರಣದ ಕಿಂಗ್ ಪಿನ್ ರಂಜಿತ್ ಎಂಬಾತ ಪರಾರಿಯಾಗಿದ್ದು, ಉಚಿತ ಜಾಹೀರಾತು ವೆಬ್ ಸೈಟ್ ನಡೆಸುತ್ತಿದ್ದ ಈತ, ವಾಟ್ಸಾಪ್ ಮೂಲಕ ಯುವತಿಯರ ಫೋಟೋಗಳನ್ನು ತರಿಸಿಕೊಳ್ಳುತ್ತಿದ್ದನೆನ್ನಲಾಗಿದೆ. ಹುಡುಗಿಯರನ್ನು ಬಯಸುವ ಗ್ರಾಹಕರಿಗೆ ಈ ಫೋಟೋ ತೋರಿಸುತ್ತಿದ್ದು, ಅವರುಗಳು ಒಪ್ಪಿಗೆ ಸೂಚಿಸಿದರೆ ವಿಮಾನದಲ್ಲಿ ಹುಡುಗಿಯರನ್ನು ಕರೆಸಿಕೊಂಡು ಐಷಾರಾಮಿ ಹೋಟೆಲ್ ಗಳನ್ನು ರೂಮ್ ಮಾಡಿ ತನ್ನ ದಂಧೆ ನಡೆಸುತ್ತಿದ್ದನೆನ್ನಲಾಗಿದೆ. ಹೀಗೆ ಒಪ್ಪಿಕೊಂಡು ಬರುವ ಹುಡುಗಿಯರಿಗೆ ಒಂದು ವಾರಕ್ಕೆ 50 ಸಾವಿರ ರೂ. ನೀಡುತ್ತಿದ್ದ ರಂಜಿತ್, ಗ್ರಾಹಕರ ಬಳಿ ದಿನವೊಂದಕ್ಕೆಲಕ್ಷಾಂತರ ರೂ. ವಸೂಲಿ ಮಾಡುತ್ತಿದ್ದನೆಂದು ಹೇಳಲಾಗಿದೆ. ಇದೀಗ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...