alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿಯ ಶೋಧಕ್ಕೆ ಸಹಕರಿಸಿದ ಸ್ನೇಹಿತನೇ ಮಾಡಿದ್ದ ಹತ್ಯೆ

ಹೈದ್ರಾಬಾದ್ ನಲ್ಲಿ ನಡೆದ 17 ವರ್ಷದ ಬಾಲಕಿಯ ಹತ್ಯೆಗೆ ಸಂಬಂಧಪಟ್ಟಂತೆ ಆಕೆಯ ಬಾಲ್ಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ಚಾಂದಿನಿ ಜೈನ್ ಎಂಬ ಬಾಲಕಿ ನಾಪತ್ತೆಯಾಗಿದ್ದಳು. ನಿನ್ನೆ ಆಕೆಯ ಮೃತದೇಹ ನಗರದ ಹೊರವಲಯದಲ್ಲಿ ಪತ್ತೆಯಾಗಿತ್ತು.

ಚಾಂದಿನಿ ಹಾಗೂ ಆರೋಪಿ ಇಬ್ಬರೂ ಬಾಲ್ಯದಿಂದ್ಲೇ ಸಹಪಾಠಿಗಳು. ಇಬ್ಬರೂ ಪರಸ್ಪರ ಪ್ರೀತಿಸ್ತಾ ಇದ್ರು. ಆದ್ರೆ ಕಳೆದ 6 ತಿಂಗಳುಗಳಿಂದ ಆತ ಬ್ರೇಕಪ್ ಮಾಡಿಕೊಳ್ಳಲು ಯತ್ನಿಸುತ್ತಿದ್ದ. ಆದ್ರೂ ಚಾಂದಿನಿ ಅವನಿಗೆ ಫೋನ್ ಕಾಲ್, ಮೆಸೇಜ್ ಮಾಡುತ್ತಿದ್ಲು.

ಕೊನೆಗೆ ಶನಿವಾರ ಸಂಜೆ ತನ್ನನ್ನು ಭೇಟಿಯಾಗುವಂತೆ ಆತ ಹೇಳಿದ್ದ. ಚಾಂದಿನಿಯನ್ನು ಗುಡ್ಡದ ಮೇಲೆ ಕರೆದೊಯ್ದಿದ್ದ. ಪ್ರೀತಿ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಕೋಪದಲ್ಲಿ ಚಾಂದಿನಿಯ ತಲೆ ಮತ್ತು ಕತ್ತಿನ ಮೇಲೆ ಜೋರಾಗಿ ಹೊಡೆದ ಯುವಕ, ಅವಳನ್ನು ಗುಡ್ಡದ ಮೇಲಿಂದ ಕೆಳಕ್ಕೆ ತಳ್ಳಿಬಿಟ್ಟಿದ್ದಾನೆ.

ಚಾಂದಿನಿ ಮನೆಗೆ ಬಾರದೇ ಇದ್ದಿದ್ರಿಂದ ಗಾಬರಿಯಾದ ಅವಳ ಸಹೋದರಿ, ಈ ಯುವಕನಿಗೆ ಕರೆ ಮಾಡಿದ್ಲು. ಚಾಂದಿನಿ ತನ್ನನ್ನು ಭೇಟಿಯಾಗಿಲ್ಲ ಎಂದಿದ್ದ ಆತ, ಅವಳ ಮನೆಗೆ ಬಂದಿದ್ದ. ಚಾಂದಿನಿಯ ಶೋಧಕ್ಕಾಗಿ ಅವಳ ಹೆತ್ತವರೊಂದಿಗೆ ತೆರಳಿದ್ದ. ಆದ್ರೆ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು ಹಂತಕನನ್ನು ಬಂಧಿಸಿದ್ದಾರೆ.

ಇಬ್ಬರೂ ಆಟೋ ಏರಿ ಹೋಗುತ್ತಿರುವ ದೃಶ್ಯ, ಆತ ಚಾಂದಿನಿಯನ್ನು ಗುಡ್ಡಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಚಾಂದಿನಿಯ ಸ್ನೇಹಿತರ ಗುಂಪಿನಲ್ಲಿ ಆತನೂ ಇದ್ದ. ಆಗಾಗ ಮನೆಗೂ ಬರುತ್ತಿದ್ದ. ಅವನೇ ಚಾಂದಿನಿಯನ್ನು ಕೊಲೆ ಮಾಡಿರೋದನ್ನು ತಿಳಿದು ಅವಳ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...