alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜು ವಿದ್ಯಾರ್ಥಿನಿಯರ ಆತ್ಮಹತ್ಯೆ ಹಿಂದಿದೆ ಒಂದೊಂದು ಕಥೆ

Girls identified, cops file abetment to suicide rapಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ವಿದ್ಯಾರ್ಥಿನಿಯರದ್ದು ಒಂದೊಂದು ಕಥೆ. ಒಬ್ಬಾಕೆ ಪ್ರೇಮ ವೈಫಲ್ಯ ಹಾಗೂ ಬ್ಲಾಕ್ ಮೇಲ್ ಕಾರಣಕ್ಕೆ ಸಾವಿಗೆ ಶರಣಾಗಿದ್ದರೆ ಮತ್ತೊಬ್ಬಾಕೆ ವಿದ್ಯಾಭ್ಯಾಸದ ಕುರಿತು ಬಂಧುಗಳ ಒತ್ತಡ ಹೆಚ್ಚಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಬ್ಬರೂ ಸಂಬಂಧಿಗಳಾಗಿದ್ದು, ಒಟ್ಟಿಗೇ ಸಾವು ಕಂಡಿದ್ದಾರೆ.

ಶುಕ್ರವಾರದಂದು ಹೈದರಾಬಾದಿನ ಆರ್.ಕೆ. ಪುರಂ ಕೆರೆಯಲ್ಲಿ ಮೌನಿಕಾ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಗೂ ಸೌಮ್ಯ ಎಂಬ ಇಂಟರ್ ಮಿಡಿಯೇಟ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ನಡೆಸಿದ ವೇಳೆ ಆತ್ಮಹತ್ಯೆ ಹಿಂದಿನ ಕಾರಣ ಬಹಿರಂಗವಾಗಿದೆ.

ಮೌನಿಕಾ, ನಾಗಾರ್ಜುನ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಆದರೆ ಆತನ ಸ್ನೇಹಿತ ಕಾಮೇಶ್ ಎಂಬಾತ ಮೌನಿಕಾ ನಡತೆ ಕುರಿತು ಇಲ್ಲಸಲ್ಲದ್ದನ್ನು ಹೇಳಿ ಸಂಬಂಧ ಮುರಿದು ಬೀಳಲು ಕಾರಣನಾಗಿದ್ದ. ಮೌನಿಕಾಳೊಂದಿಗೆ ಸಂಬಂಧ ಕಡಿದುಕೊಂಡ ನಾಗಾರ್ಜುನ, ಬೇರೊಬ್ಬ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದಾದ ಬಳಿಕ ಕಾಮೇಶ್, ಮೌನಿಕಾಳ ಬೆನ್ನು ಬಿದ್ದಿದ್ದ. ತನ್ನೊಂದಿಗೆ ಸಹಕರಿಸದಿದ್ದರೆ ಹಳೆಯ ಪ್ರೇಮ ಪ್ರಕರಣವನ್ನು ಆಕೆಯ ಪೋಷಕರಿಗೆ ಹೇಳುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ.

ಮೌನಿಕಾ ತಾಯಿಯ ಸಹೋದರಿಯ ಪುತ್ರಿಯಾಗಿದ್ದ ಸೌಮ್ಯ, ಶ್ರೀ ಚೈತನ್ಯ ರೆಸಿಡೆನ್ಶಿಯಲ್ ಕಾಲೇಜಿಗೆ ಸೇರಿಕೊಂಡಿದ್ದು, ಅನಾರೋಗ್ಯದ ಕಾರಣ 20 ದಿನಗಳ ಹಿಂದೆ ಮೌನಿಕಾಳ ಮನೆಗೆ ಬಂದಿದ್ದಳು. ಆಕೆಗೆ ಓದುವ ಇಚ್ಚೆಯಿಲ್ಲದಿದ್ದರೂ ಕೆಲ ಬಂಧುಗಳು ಒತ್ತಡ ಹೇರುತ್ತಿದ್ದರೆನ್ನಲಾಗಿದ್ದು, ಹೀಗಾಗಿ ಇಬ್ಬರೂ ತಮ್ಮದೇ ಆದ ಕಾರಣಗಳಿಗಾಗಿ ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಪೊಲೀಸರು ಮೌನಿಕಾ ಪ್ರಕರಣದಲ್ಲಿ ಕಾಮೇಶ್ ವಿರುದ್ದ ಹಾಗೂ ಸೌಮ್ಯ ಪ್ರಕರಣದಲ್ಲಿ ಆಕೆಯ ಬಂಧುಗಳ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...