alex Certify
ಕನ್ನಡ ದುನಿಯಾ       Mobile App
       

Kannada Duniya

4 ಕೋಟಿ ರೂ. ಮೌಲ್ಯದ ಸಿಗರೇಟ್ ದರೋಡೆ

cige

ಹೈದ್ರಾಬಾದ್ ನಲ್ಲಿ ಸಿನಿಮೀಯ ದರೋಡೆ ನಡೆದಿದೆ. ದರೋಡೆಕೋರರ ಗ್ಯಾಂಗ್ ಒಂದು 4 ಕೋಟಿ ಮೌಲ್ಯದ ಸಿಗರೇಟ್ ತುಂಬಿದ್ದ ಲಾರಿಯನ್ನೇ ಹೊತ್ತೊಯ್ದಿದೆ. ಮುಶೀರಾಬಾದ್ ನಿಂದ ಸಿಗರೇಟ್ ಅನ್ನು ತಿರುಪತಿಗೆ ಕೊಂಡೊಯ್ಯಲಾಗುತ್ತಿತ್ತು.

ಬಿಹಾರ ಮೂಲದ ಅಖಿಲೇಶ್ ಯಾದವ್ ಎಂಬಾತ ಲಾರಿ ಚಾಲನೆ ಮಾಡ್ತಾ ಇದ್ದ. ಔಟರ್ ರಿಂಗ್ ರೋಡ್ ಬಳಿ ಬರ್ತಿದ್ದಂತೆ ಎರಡು ಟಾಟಾ ಸುಮೋ ಹಾಗೂ ಒಂದು ಲಾರಿಯಲ್ಲಿ ದರೋಡೆಕೋರರು ಅವನನ್ನು ಹಿಂಬಾಲಿಸಿದ್ದಾರೆ. ಪೆದ್ದ ಅಂಬರ್ಪೇಟ್ ಬಳಿ ಸಿಗರೇಟ್ ತುಂಬಿದ್ದ ಲಾರಿಯನ್ನು ಅಡ್ಡಗಟ್ಟಿದ್ದಾರೆ.

30 ಜನರ ಗ್ಯಾಂಗ್ ಲಾರಿ ಚಾಲಕನ ಮೇಲೆ ದಾಳಿ ಮಾಡಿದೆ. ಆತನನ್ನ ಹಗ್ಗದಿಂದ ಕಟ್ಟಿಹಾಕಿಕೊಂಡು ಲಾರಿ ಸಮೇತ ದುಷ್ಕರ್ಮಿಗಳು ಅಲ್ಲಿಂದ ಹೊರಟಿದ್ದಾರೆ. ನಂತರ ದಟ್ಟ ಕಾಡಿನ ಸಮೀಪ ಕೊಂಡೊಯ್ದು, ಸಿಗರೇಟ್ ಅನ್ನೆಲ್ಲ ಲಾರಿಯಿಂದ ಅನ್ ಲೋಡ್ ಮಾಡಿದ್ದಾರೆ.

ಲಾರಿ ಮತ್ತು ಚಾಲಕ ಇಬ್ಬರನ್ನೂ ಅಲ್ಲೇ ಬಿಟ್ಟು ಸಿಗರೇಟ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಹೇಗೋ ಕಷ್ಟಪಟ್ಟು ಮುಖ್ಯರಸ್ತೆಗೆ ಬಂದ ಲಾರಿ ಚಾಲಕ ಪೊಲೀಸರಿಗೆ ವಿಷಯ ತಿಳಿಸಿದ್ದ. ಬೇರೆ ರಾಜ್ಯದ ಗ್ಯಾಂಗ್ ಈ ಕೃತ್ಯ ಎಸಗಿರಬಹುದು ಅಂತಾ ಪೊಲೀಸರು ಶಂಕಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...