alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ಅಪಹರಣಕ್ಕೆ ಯತ್ನಿಸಿ ಸಿಕ್ಕಿಬಿದ್ದ ಕ್ಯಾಬ್ ಚಾಲಕ

ಹೈದ್ರಾಬಾದ್ ನಲ್ಲಿ ಕ್ಯಾಬ್ ಚಾಲಕನೊಬ್ಬ ಬಾಲಕಿಯ ಅಪಹರಣಕ್ಕೆ ಯತ್ನಿಸಿದ್ದಾನೆ. 9 ವರ್ಷದ ಬಾಲಕಿಯ ಪಕ್ಕದ ಮನೆಯಲ್ಲೇ ಕ್ಯಾಬ್ ಚಾಲಕ ವಾಸವಿದ್ದ. ಆತ ಬಾಲಕಿಯ ಅಪಹರಣಕ್ಕೆ ಯತ್ನಿಸಿದ್ದಾನೆ ಅಂತಾ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಐಪಿಸಿ ಸೆಕ್ಷನ್ 363 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈಗಾಗ್ಲೇ ಆರೋಪಿ ಕ್ಯಾಬ್ ಚಾಲಕನನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಕ್ಯಾಬ್ ಚಾಲಕನ ಉದ್ದೇಶವೇನು? ಅಪಹರಣಕ್ಕೆ ಯತ್ನಿಸಿದ್ದೇಕೆ? ಉಭಯ ಕುಟುಂಬಗಳ ಮಧ್ಯೆ ದ್ವೇಷವೇನಾದ್ರೂ ಇತ್ತಾ ಎಂಬ ಬಗ್ಗೆ ಕೂಡ ಪೊಲೀಸರು ತನಿಖೆ ಮಾಡ್ತಿದ್ದಾರೆ.

ಆರೋಪಿ ಚಾಲಕನ ಬಾಯ್ಬಿಡಿಸಲು ಕಸರತ್ತು ನಡೆಸಿದ್ದಾರೆ. ಈ ಅಪಹರಣ ಯತ್ನ ಪ್ರಕರಣ ಸುತ್ತಮುತ್ತಲ ನಿವಾಸಿಗಳಲ್ಲಿ ಕೂಡ ಆತಂಕ ಹುಟ್ಟಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...